Shwetha Prasad: ಸೌದಿಯಲ್ಲಿ ರಾಧಾ ರಮಣ ನಟಿ ಶ್ವೇತಾ ಪ್ರಸಾದ್!
ಕನ್ನಡದ ರಾಧಾ ರಮಣ ಸೀರಿಯಲ್ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದಾರೆ. ಅಲ್ಲಿಯ ಸುಂದರ ತಾಣಗಳನ್ನ ಕಂಡು ಖುಷಿ ಪಟ್ಟಿದ್ದಾರೆ. ಆ ಖುಷಿಯನ್ನ ಫೋಟೋ ಮೂಲಕ ಎಲ್ಲರಿಗೂ ಶೇರ್ ಮಾಡಿದ್ದಾರೆ.
ಕನ್ನಡದ ರಾಧಾ ರಮಣ ಸೀರಿಯಲ್ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದಾರೆ. ಅಲ್ಲಿಯ ಸುಂದರ ತಾಣಗಳನ್ನ ಕಂಡು ಖುಷಿ ಪಟ್ಟಿದ್ದಾರೆ. ಆ ಖುಷಿಯನ್ನ ಫೋಟೋ ಮೂಲಕ ಎಲ್ಲರಿಗೂ ಶೇರ್ ಮಾಡಿದ್ದಾರೆ.
2/ 6
ಶ್ವೇತಾ ಪ್ರಸಾದ್ ಸೌದಿಗೆ ಹೋಗಿದ್ಯಾಕೆ? ಅನ್ನೋ ಈ ಒಂದು ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಇದು ಇವರ ವೈಯುಕ್ತಿಕ ಪ್ರವಾಸ ಅಂತೂ ಅಲ್ವೇ ಅಲ್ಲ. ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಶ್ವೇತಾರನ್ನ ಆಹ್ವಾನಿಸಿ ಇಲ್ಲಿ ಆತಿಥ್ಯ ನೀಡಿದೆ.
3/ 6
ಸೌದಿ ಅರೇಬಿಯಾದ ಪ್ರವಾಸೋದ್ಯಮ ಪ್ರಾಧಿಕಾರ ತಮ್ಮ ದೇಶದ ಪ್ರವಾಸೋದ್ಯಮವನ್ನ ಉತ್ತೇಜಿಸಲು ತೀರ್ಮಾನಿಸಿದೆ. ಬೇರೆ ಬೇರ ದೇಶದ ಸೆಲೆಬ್ರಿಟಿಗಳನ್ನೂ ತಮ್ಮ ದೇಶಕ್ಕೆ ಆಹ್ವಾನಿಸಿ ಆತಿಥ್ಯ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಧಾ ರಮಣ ಸೀರಿಯಲ್ ಶ್ವೇತಾ ಪ್ರಸಾದ್ ಇಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ.
4/ 6
ಶ್ರೀರಸ್ತು ಶುಭಮಸ್ತು ಹಾಗೂ ರಾಧಾ ರಮಣ ಸೀರಿಯಲ್ ಖ್ಯಾತಿ ನಟಿ ಶ್ವೇತಾ ಪ್ರಸಾದ್, ಬರೋಬ್ಬರಿ 6 ದಿನಗಳ ಕಾಲ ಸೌದಿಯ ಸುಂದರ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ. ಹೀಗೆ ಸೌದಿಯ ಪ್ರವಾಸೋದ್ಯಮ ಪ್ರಾಧಿಕಾರ ಆತಿಥ್ಯ ಸ್ವೀಕರಿಸಿದ ಮೊದಲ ಕನ್ನಡದ ನಟಿ ಇವರಾಗಿದ್ದಾರೆ.
5/ 6
ಶ್ವೇತಾ ಪ್ರಸಾದ್ ಅವರ ಸೌದಿಯ ವಿವಿಧ ಸುಂದರ ತಾಣಗಳಲ್ಲಿ ಒಳ್ಳೆ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಪ್ರಾಧಿಕಾರ ಈ ಫೋಟೋ ಶೂಟ್ ನಲ್ಲಿ ಸೌದಿಯ ಪ್ರವಾಸಿ ತಾಣದ ಅದ್ಭುತಗಳು ಕ್ಯಾಪ್ಚರ್ ಆಗಿವೆ.
6/ 6
ರಾಧಾ ರಮಣ ಸೀರಿಯಲ್ ಮೂಲಕ ಜನರಿಗೆ ಹತ್ತಿರವಾದ ಶ್ವೇತಾ ಪ್ರಸಾದ್, "ಕಳ್ಬೆಟ್ಟದ ದರೋಡೆಕೋರರು" ಚಿತ್ರದ ಮೂಲಕ ಬೆಳ್ಳಿ ತೆರೆಗೂ ಪ್ರವೇಶ ಮಾಡಿದ್ದಾರೆ. ಈಗ "ಅರಿಹ" ಅನ್ನೋ ವಿಶೇಷ ಟೈಟಲ್ನ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.