ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಅವರು ವೋಟ್ ಮಾಡಿ, ಸಂದೇಶವೊಂದನ್ನು ಹಾಕಿದ್ದಾರೆ. ನಮ್ಮ ಮನೆಕೆಲಸದಾಕೆ ಮತದಾನ ಮಾಡಲು ಬಸ್ ಹಿಡಿದು ಕುಟುಂಬ ಸಮೇತ ಗುಲ್ಬರ್ಗ ಸಮೀಪದ ತನ್ನ ಹಳ್ಳಿಗೆ ಹೋಗಿದ್ದಾಳೆ. ಇತ್ತ ನನ್ನ ಪರಿಚಿತರಾದ 2 ಲಕ್ಷ ರೂ ವೇತನ ಪಡೆಯುವ ವಿವಿ ಅಧ್ಯಾಪಕರು,ಯಾರೋ ಗೆದ್ದು ಬೀಗೋದಿಕ್ಕೆ ನಾನ್ಯಾಕೆ ಡ್ಯೂಟಿ ಮಾಡಬೇಕು? ಅಂತ ಒಲ್ಲದ ಮನಸ್ಸಿನಿಂದ ಗೊಣಗುತ್ತಾ ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದರು. ಮತಗಟ್ಟೆಗಳ ಕೆಲಸ ಮತದಾನದಷ್ಟೇ ಪವಿತ್ರವಲ್ಲವೇ? ನಮ್ಮ ವ್ಯವಸ್ಥೆಯಲ್ಲಿ ಅವಿದ್ಯಾವಂತರ ಮುಗ್ಧತೆಗಿಂತ ವಿದ್ಯಾವಂತರ ಸಿನಿಕತೆ ಅಪಾಯಕಾರಿ ಅನ್ನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.