ಬಣ್ಣದ ಲೋಕ ಒಮ್ಮೆ ಕೈ ಬೀಸಿ ಕರೆದ್ರೆ ಅದರಿಂದ ತಪ್ಪಿಸಿಕೊಳ್ಳು ಕಷ್ಟ ಅಂತಾರೆ. ಯಾವ ಪಾತ್ರವಾದ್ರೂ ಸರಿ ನಟನೆಯೇ ಜೀವನ ಅಂದುಕೊಳ್ತಾರೆ. ಹಲವು ಧಾರಾವಾಹಿಗಳಲ್ಲಿ ಅಮ್ಮನ ಪಾತ್ರ ಮಾಡುತ್ತಿದ್ದ ನಟಿ ಸ್ವಾತಿ ಹೆಚ್ ವಿ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
2/ 8
ಸ್ವಾತಿ ಅವರು ಮದುವೆ ಆದ ಮೇಲೆ ಧಾರಾವಾಹಿಗಳನ್ನು ಮಾಡಲ್ವಾ ಎಂದು ಜನ ಕೇಳ್ತಾ ಇದ್ರು. ಸ್ವಾತಿ ಅವರು ಮದುವೆ ಆದ ಮೇಲೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
3/ 8
ಕಲರ್ಸ್ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗ್ತಿರುವ ಗೀತಾ ಧಾರಾವಾಹಿಯಲ್ಲಿ ಸ್ವಾತಿ ಕಾಣಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಪಾತ್ರ ಮಾಡಿದ್ದಾರೆ.
4/ 8
ಗೀತಾ ಧಾರಾವಾಹಿಯಲ್ಲಿ ನಾಯಕ ವಿಜಯ್ ಅಪ್ಪನ ಕೊಲೆಯಾಗಿದ್ದು, ಆ ಕೇಸ್ ತನಿಖೆ ನಡೆಸುತ್ತಿದ್ದಾರೆ. ಅದರ ತನಿಖೆ ಜವಾಬ್ದಾರಿಯನ್ನು ಪೊಲೀಸ್ ಆಗಿ ಬಂದಿರುವ ಸ್ವಾತಿ ತೆಗೆದುಕೊಂಡಿದ್ದಾರೆ.
5/ 8
ಸ್ಟಾರ್ ಸುವರ್ಣದಲ್ಲಿ ರಾತ್ರಿ 9 ಗಂಟೆಗೆ ಎಡೆಯೂರು ಸಿದ್ಧಲಿಂಗೇಶ್ವರ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪೌರಾಣಿಕ ಧಾರಾವಾಹಿ ಆಗಿದ್ದು ಜನರಿಗೆ ಇಷ್ಟವಾಗಿದೆ.
6/ 8
ಎಡೆಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ಸ್ವಾತಿ ಅವರು ಸನ್ಯಾಸಿನಿ ಆಗಿ ಬಂದಿದ್ದಾರೆ. ಇದರಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
7/ 8
ಭಾನುಮತಿ ಎಂಬ ಪಾತ್ರ ಮಾಡ್ತಿದ್ದು ಜನರ ಕಣ್ಣಿಗೆ ಮಂಕುಬೂದಿ ಹಚ್ಚುತ್ತಿದ್ದಾರೆ. ಇಲ್ಲೂ ಸ್ವಾತಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
8/ 8
ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾಳ ಅಮ್ಮ ಮಾಡಿದ್ದರು ಸ್ವಾತಿ. ಸ್ವಾತಿ ಅವರು ಮತ್ತೆ ಕಮ್ ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
First published:
18
Actress Swathi: ಪೊಲೀಸ್, ಸನ್ಯಾಸಿನಿ ಪಾತ್ರದಲ್ಲಿ ಕಮ್‍ಬ್ಯಾಕ್ ಮಾಡಿದ ನಟಿ ಸ್ವಾತಿ ಹೆಚ್.ವಿ!
ಬಣ್ಣದ ಲೋಕ ಒಮ್ಮೆ ಕೈ ಬೀಸಿ ಕರೆದ್ರೆ ಅದರಿಂದ ತಪ್ಪಿಸಿಕೊಳ್ಳು ಕಷ್ಟ ಅಂತಾರೆ. ಯಾವ ಪಾತ್ರವಾದ್ರೂ ಸರಿ ನಟನೆಯೇ ಜೀವನ ಅಂದುಕೊಳ್ತಾರೆ. ಹಲವು ಧಾರಾವಾಹಿಗಳಲ್ಲಿ ಅಮ್ಮನ ಪಾತ್ರ ಮಾಡುತ್ತಿದ್ದ ನಟಿ ಸ್ವಾತಿ ಹೆಚ್ ವಿ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.