ಅದ್ದೂರಿಯಾಗಿ ನಡೆಯಲಿದೆ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ Kavya Gowda ಮದುವೆ..!
Kavya Gowda Wedding: ರಾಧಾ ರಮಣ, ಮೀರಾ ಮಾಧವ ಹಾಗೂ ಗಾಂಧಾರಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾವ್ಯಾ ಅವರು ಇಷ್ಟದ ಹುಡುಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಇನ್ನು ಈ ನಟಿಯ ಮದುವೆ ಸಖತ್ ಅದ್ದೂರಿಯಾಗಿ ನಡೆಯಲಿದ್ದು, ಬೆಂಗಳೂರಿನ ಹೋಟೆಲ್ನಲ್ಲೇ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕನ್ನಡದ ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಕಾವ್ಯಾ ಗೌಡ ಬಕಾಸುರ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈ ನಟಿ ಈಗ ತಮ್ಮ ಜೀವನದ ಮತ್ತೊಂದು ಅಧ್ಯಾಯದ ಆರಂಭದಲ್ಲಿದ್ದಾರೆ.
2/ 9
ಬೆಂಗಳೂರು ಮೂಲದ ಉದ್ಯಮಿಯಾಗಿರುವ ಸೋಮಶೇಖರ್ ಅವರನ್ನು ಮದುವೆಯಾಗುತ್ತಿರುವ ಕಾವ್ಯಾ ಗೌಡ ತುಂಬಾ ಖುಷಿಯಲ್ಲಿದ್ದಾರೆ. ತನ್ನ ಹುಡುಗನ ಜತೆಗಿನ ಚಿತ್ರವನ್ನು ಹಂಚಿಕೊಂಡಿದ್ದು, ನೀನು ನನ್ನ ಬೆಸ್ಟ್ ಫ್ರೆಂಡ್ ಹಾಗೂ ಲವರ್ ಎಂದು ಬರೆದುಕೊಂಡಿದ್ದಾರೆ.
3/ 9
ಈ ಜೋಡಿಯ ಮದುವೆ ಡಿ. 2ರಂದು ಬೆಂಗಳೂರಿನಲ್ಲೇ ನಡೆಯಲಿದೆ. ಅದಕ್ಕೂ ಮೊದಲು ನ. 29ರಂದು ಬೆಂಗಳೂರಿನ ಜೆ ಡಬ್ಲ್ಯು ಮ್ಯಾರಿಯೇಟ್ ಹೋಟೆಲ್ನಲ್ಲಿ ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮ ನಡೆಯಲಿದೆ.
4/ 9
ಡಿಸೆಂಬರ್ 1ರಂದು ಬೆಂಗಳೂರಿನಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಆರತಕ್ಷತೆ ಆಯೀಜಿಸಲಾಗಿದ್ದು, ಅಲ್ಲೇ 2ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ.
5/ 9
ಕಾವ್ಯಾ ಗೌಡ ಅವರು ಇಷ್ಟಪಟ್ಟಂತೆಯೇ ಅವರ ಮದುವೆಗೆ ಬರುವ ಅತಿಥಿಗಳಿಗೆ ಒಂದೊಂದು ಗಿಡ ಕೊಡಲು ನಿರ್ಧರಿಸಲಾಗಿದೆಯಂತೆ. ಮದುವೆಯಲ್ಲಿ ಕೊರೋನಾ ನಿಯಮಗಳನ್ನು ಪಾಲಿಸಲಾಗುತ್ತದೆಯಂತೆ.
6/ 9
ಸಾಕಷ್ಟು ವಕಾಶಗಳು ಅರಸಿ ಬಂದರೂ ಕಳೆದ ಎರಡು ವರ್ಷಗಳಿಂದ ಕಾವ್ಯಾ ಗೌಡ ಅವರು ಬಣ್ಣದ ಲೋಕದಿಂದ ದೂರ ಇದ್ದಾರೆ. ಕಾರಣ ಅವರು ಆಭರಣಗಳ ಡಿಸೈನ್ ಕಲಿಯುತ್ತಿದ್ದಾರಂತೆ. ಇದನ್ನೇ ಅವರು ಮುಂದುವೆರೆಸಿಕೊಂಡು ಹೋಗಲು ನಿರ್ಧರಿಸಿದ್ದಾರಂತೆ. ಹೀಗೆಂದು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಕಾವ್ಯಾ.
7/ 9
ಕಾವ್ಯಾ ಗೌಡ ಅವರ ಅಕ್ಕ ಒಂದು ಡಿಸೈನರ್ ಸ್ಟುಡಿಯೋ ನಡೆಸುತ್ತಿದ್ದು, ಕಾವ್ಯಾ ಅವರು ತಮ್ಮ ಮದುವೆಗೆ ಆ ಸ್ಟುಡಿಯೋದಲ್ಲಿ ಡಿಸೈನ್ ಮಾಡಲಾದ ವಸ್ತ್ರಗಳನ್ನೇ ತೊಡಲಿದ್ದಾರಂತೆ.
8/ 9
ಇತ್ತೀಚೆಗಷ್ಟೆ ಕಾವ್ಯಾ ಗೌಡ ಅವರ ಬ್ಯಾಚುಲರ್ ಪಾರ್ಟಿ ನಡೆದಿದೆ. ಅಕ್ಕ ಹಾಗೂ ತಮ್ಮ ಪ್ರೀತಿಯ ಹುಡುಗ ಈ ಪಾರ್ಟಿ ಆಯೋಜಿಸಿದ್ದರಂತೆ. ಈ ಪಾರ್ಟಿಯಲ್ಲಿ ಕಾವ್ಯಾ ಗೌಡ ಸಖತ್ತಾಗಿ ಎಂಜಾಯ್ ಮಾಡಿದ್ದಾರೆ.
9/ 9
ಕಾವ್ಯಾ ಗೌಡ ಅವರ ಮದುವೆಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಸೆಲೆಬ್ರಿಟಿಗಳು ಹಾಗೂ ತಂತ್ರಜ್ಞರು ಹಾಜರಿ ಹಾಕಲಿದ್ದಾರಂತೆ. ಅಲ್ಲದೆ ಕಾವ್ಯಾ ಹಾಗೂ ಸೋಮಶೇಖರ್ ಅವರ ಮದುವೆ ಕಳೆದ ಮೇ ತಿಂಗಳಿನಲ್ಲೇ ನಡೆಯಬೇಕಿತ್ತು. ಆದರೆ, ಕೊರೋನಾ ಕಾರಣಕ್ಕೆ ಅದನ್ನು ಮುಂದೂಡಲಾಗಿತ್ತು.