Bachelorette Partyಯಲ್ಲಿ ಎಂಜಾಯ್ ಮಾಡಿದ ಕಿರುತೆರೆ ನಟಿ Kavya Gowda
ಕಿರುತೆರೆ (Kannada Serial) ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿರುವ ನಟಿ ಕಾವ್ಯಾ ಗೌಡ (Kavya Gowda Wedding) ಅವರ ಮುದವೆ ಡಿಸೆಂಬರ್ನಲ್ಲಿ ನಡೆಯಲಿದೆ. ಈ ಹಿಂದೆಯೇ ನಡೆಯಬೇಕಿದ್ದ ಇವರ ಮದುವೆ ಕೊರೋನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಮತ್ತೆ ಇವರ ಮದುವೆಗೆ ದಿನಾಂಕ ನಿಗದಿಯಾಗಿದೆ. ಇದರಿಂದಲೇ ಕಾವ್ಯಾ ಗೌಡ ತಮ್ಮ ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದಾರೆ.
ರಾಧಾ ರಮಣ, ಗಾಂಧಾರಿ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಅವರ ಮದುವೆ ಈಗ ನಡೆಯಲಿದೆ. ಈ ಹಿಂದೆಯೇ ಇವರ ಮದುವೆಗೆ ದಿನಾಂಕ ನಿಗದಿಯಾಗಿತ್ತು. ತಮ್ಮ ಮದುವೆ ಫಿಕ್ಸ್ ಆದ ಖುಷಿಯಲ್ಲಿ ಕಾವ್ಯಾ ಗೌಡ ದುಬೈಗೆ ಹೋಗಿದ್ದರು.
2/ 9
ಕಾವ್ಯಾ ಗೌಡ ಅವರು ಸೋಮಶೇಖರ್ ಎಂಬ ಉದ್ಯಮಿಯನ್ನು ವರಿಸಲಿದ್ದಾರೆ. ಸೋಮಶೇಖರ್ ಬೆಂಗಳೂರಿನವರೇ ಆಗಿದ್ದಾರೆ. ಇವರ ನಿಶ್ಚಿತಾರ್ಥ ಆದ ಕೂಡಲೇ ಈ ಜೋಡಿಯು ದುಬೈಗೆ ಹಾರಿದ್ದರು.
3/ 9
ಕಾವ್ಯಾ ಗೌಡ ಹಾಗೂ ಸೋಮಶೇಖರ್ ಅವರು ದುಬೈನಲ್ಲಿ ಕೆಲ ತಿಂಗಳ ಹಿಂದಯೇ ದುಬೈನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು.
4/ 9
ಆದರೆ, ಕೊರೋನಾ ಕರಾಣದಿಂದಾಗಿ ಕಾವ್ಯಾ ಗೌಡ ಹಾಗೂ ಸೋಮಶೇಖರ್ ಅವರ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಲಾಗಿತ್ತು. ಈಗ ಮತ್ತೆ ಇವರ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ.
5/ 9
ಅದಕ್ಕೆ ತಮ್ಮ ವಿವಾಹಕ್ಕೆ ಮೊದಲು ಕಾವ್ಯಾ ಗೌಡ ಅವರು ಸ್ನೇಹಿತರು ಹಾಗೂ ಆತ್ಮೀಯರ ಜೊತೆ ಸೇರಿ ಭರ್ಜರಿಯಾಗಿ ಬ್ಯಾಚುರಲ್ ಪಾರ್ಟಿ ಆಚರಿಸಿಕೊಂಡಿದ್ದಾರೆ.
6/ 9
ಕಾವ್ಯಾ ಗೌಡ ಹಾಗೂ ಸೋಮಶೇಖರ್ ಅವರ ಮದುವೆ ಡಿ. 2ರಂದು ನಡೆಯಲಿದೆ. ಇದೇ ಖುಷಿಯಲ್ಲಿ ಕಾವ್ಯಾ ಗೌಡ ತಮ್ಮ ಸಹೋದರಿ ಭವ್ಯಾ ಗೌಡ, ಅಕ್ಕನ ಮಗಳು ಹಾಗೂ ಆತ್ಮೀಯರ ಜೊತೆ ಈ ಪಾರ್ಟಿ ಮಾಡಿಕೊಂಡಿದ್ದಾರೆ.
7/ 9
ಬ್ಯಾಚುಲರ್ ಪಾರ್ಟಿಯ ಜೊತೆಗೆ ಸಖತ್ ಫೋಟೋಶೂಟ್ ಸಹ ಮಾಡಿಸಲಾಗಿದೆ. ಇದರಲ್ಲಿ ಮದುಮಗಳು ಸೇರಿದಂತೆ ಇತತರೂ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.
8/ 9
ಕಾವ್ಯಾ ಗೌಡ ಹಾಗೂ ಅವರ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಈ ಲೆಟೆಸ್ಟ್ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ.
9/ 9
ಕಾವ್ಯಾ ಗೌಡ ಅವರ ಬ್ಯಾಚುಲರ್ ಪಾರ್ಟಿಯಲ್ಲಿ ತೆಗೆದ ಚಿತ್ರ. ಇನ್ನು ಮದುವೆಗೆ ಈಗಾಗಲೇ ಇವರ ಮನೆಗಳಲ್ಲಿ ಸಿದ್ಧತೆ ಆರಂಭವಾಗಿದೆ.