ಹಿರಿಯ ನಟಿ Girija Lokeshಗೆ ಜನ್ಮದಿನದ ಸಂಭ್ರಮ.. ಅಮ್ಮನ ಬಗ್ಗೆ ಸೃಜನ್ ಲೋಕೇಶ್ ಭಾವನಾತ್ಮಕ ಪೋಸ್ಟ್!
`ನನ್ನ ಶಕ್ತಿ ನನ್ನ ಧೈರ್ಯ, ನನ್ನ ಮನೆಯ ಯಜಮಾನಿ, ನನ್ನ ಎಲ್ಲಾ ಯಶಸ್ಸಿಗೆ ಕಾರಣಕರ್ತೆ, ನನ್ನ ಪ್ರೀತಿಯ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಲವ್ ಯು ಅಮ್ಮ ಎಂದು ಸೃಜನ್ ಲೋಕೇಶ್ ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಹಿರಿಯ ನಟಿ ಗಿರಿಜಾ ಲೋಕೇಶ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ 200ಕ್ಕೂ ಅಧಿಕ ಚಿತ್ರ ಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ.
2/ 6
ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
3/ 6
`ನನ್ನ ಶಕ್ತಿ ನನ್ನ ಧೈರ್ಯ, ನನ್ನ ಮನೆಯ ಯಜಮಾನಿ, ನನ್ನ ಎಲ್ಲಾ ಯಶಸ್ಸಿಗೆ ಕಾರಣಕರ್ತೆ, ನನ್ನ ಪ್ರೀತಿಯ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಲವ್ ಯು ಅಮ್ಮ ಎಂದು ಸೃಜನ್ ಲೋಕೇಶ್ ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.
4/ 6
ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಗಿರಿಜಾ ಲೋಕೇಶ್ ಅವರು ಸಾವಿರಾರು ನಾಟಕಗಳ ಮೂಲಕ ಮನೆ ಮಾತಾದವರು.
5/ 6
1963ರಲ್ಲಿ ರಂಗಭೂಮಿ ಪ್ರವೇಶಿಸಿದ ನಂತರ ಅವರು ಹೊರಳಿದ್ದು ಸಿನಿಮಾ ಲೋಕಕ್ಕೆ. ಕಾಕನಕೋಟೆ, ಭುಜಂಗಯ್ಯನ ದಶಾವತಾರ, ದಾಹ ಹೀಗೆ ನೂರಾರು ಸಿನಿಮಾಗಳಲ್ಲಿನ ಗಿರಿಜಾ ಲೋಕೇಶ್ ನಟಿಸಿದ್ದಾರೆ.
6/ 6
ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ, ಮುನ್ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರಗಳಲ್ಲಿ ನಟನೆಯಿಂದ ಜನಮನ್ನಣೆ ಗಳಿಸಿದ ಗಿರಿಜಾ ಲೋಕೇಶ್ ಅವರನ್ನು ಸಾಕಷ್ಟು ಪ್ರಶಸ್ತಿಗಳೂ ಅರಸಿಕೊಂಡು ಬಂದಿವೆ.