ನಟ ಶ್ರೀನಗರ್ ಕಿಟ್ಟಿ, ‘ಗೌಳಿ‘ ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆ ಮೂಡಿಸಿದ್ದಾರೆ. ಹಿಂದೆಂದೂ ಕಾಣಿಸದ ರೀತಿಯಲ್ಲಿ ಪಕ್ಕಾ ಮಾಸ್ ಲುಕ್ ನಲ್ಲಿ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪ್ರತಿಯೊಂದು ಪಾತ್ರಗಳು ಸಹ ಅದೇ ತೂಕವನ್ನು ಹೋಂದಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತಿದೆ. ಚಿತ್ರಕ್ಕೆ ನಿರ್ದೇಶಕ ಸೂರ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಅನೇಕ ವರ್ಷಗಳಿಂದ ಸಿನಿರಂಗದಿಂದ ದೂರವಿದ್ದ ನಟ ಶ್ರೀನಗರ ಕಿಟ್ಟು ಇದಿಗ ಗೌಳಿ ಅವತಾರದಲ್ಲಿ ಚಿತ್ರಪ್ರೇಮಿಗಳ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಅದರಲ್ಲಿಯೂ ಖಡಕ್ ಲುಕ್ ನಲ್ಲಿ ಮಿಂಚುತ್ತಿರುವ ಕಿಟ್ಟಿ, ಹೊಸ ಭರಸೆಯನ್ನು ಮೂಡಿಸಿದ್ದಾರೆ. ಪಕ್ಕಾ ರಾ ಲುಕ್ ನಲ್ಲಿರುವ ಕಿಟ್ಟಿ, ಉದ್ದ ಕೂದಲು, ಗಡ್ಡದೊಂದಿಗೆ ಮಿಂಚುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳು ಸಿನಿಂಆದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಉಳಿದಂತೆ ವಿಲನ್ ಪಾತ್ರದಲ್ಲಿ ಸೂಪರ್ ಆಗಿ ಕಾಣಿಸಿಕೊಂಡಿರುವ ನಟ ಯಶ್ ಶೆಟ್ಟಿ ಮತ್ತು ಕಾಲ್ಟಾ ಪಾತ್ರದಲ್ಲಿ ಮಿಂಚುತ್ತಿರುವ ಕಾಕ್ರೋಚ್ ಸುಧಿ ಲುಕ್ ಸಹ ಭಯಾನಕವಾಗಿದೆ. ಒಟ್ಟಾರೆಯಾಗಿ ಕೇವಲ ಪೋಸ್ಟರ್ ಮತ್ತು ಟೀಸರ್ ನಿಂದಲೇ ಗೌಳಿ ಚಿತ್ರ ಸಖತ್ ಸದ್ದು ಮಾಡುತ್ತಿದ್ದು, ಮತ್ತೊಂದು ಇಂಡಸ್ಟ್ರಿ ಹಿಟ್ ಚಿತ್ರ ಇದಾಗಲಿದೆ ಎಂಬ ಮಾತುಗಳು ಸ್ಯಾಂಡಲ್ವುಡ್ ನಲ್ಲಿ ಕೇಳಿಬರುತ್ತಿದೆ. ಚಿತ್ರಕ್ಕೆ ಸೂರ ನಿರ್ದೇಶನ ಮಾಡಿದ್ದು, ಪಾವನಾ ಕಿಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ.