PHOTOS: ಇದೇ ಶುಕ್ರವಾರ ತೆರೆ ಕಾಣಲಿರುವ 'ಚಂಬಲ್​' ಚಿತ್ರದ ಫೋಟೋಶೂಟ್​ನ ಚಿತ್ರಗಳು..!

ನೀನಾಸಂ ಸತೀಶ್ ಅಭಿನಯದ 'ಚಂಬಲ್' ಸಿನಿಮಾ ಇದೇ ವಾರ (ಫೆ.22)ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಐಎಎಸ್ ಅಧಿಕಾರಿಯಾಗಿ ನೀನಾಸಂ ಸತೀಶ್ ತೆರೆ ಮೇಲೆ ಮಿಂಚಲಿರುವ ಈ ಸಿನಿಮಾವನ್ನು ಜೇಕಬ್​ ವರ್ಗೀಸ್​ ಕತೆ ಬರೆದು ನಿರ್ದೇಶಿಸಿದ್ದಾರೆ. ಜೇಕಬ್​ ಫಿಲ್ಮ್ಸ್​ ಅಡಿ  ದಿನೇಶ್ ಕುಮಾರ್ ಹಾಗೂ ಮಾಥ್ಯೂ ವರ್ಗೀಸ್​ ನಿರ್ಮಿಸಿರುವ ಈ ಸಿನಿಮಾ ಬಿಡುಗಡೆಗೆ ಮುನ್ನವೇ ವಿವಾದಕ್ಕೀಡಾಗಿತ್ತು.  ಈ ಸಿನಿಮಾ ಟ್ರೈಲರ್ ನೋಡಿದ ನಂತರ ಇದು ಡಿ.ಕೆ.ರವಿ ಜೀವನಚರಿತ್ರೆ ಆಧಾರಿತ ಚಿತ್ರ ಎಂಬ ಮಾತುಗಳು ಆರಂಭವಾಗಿದ್ದವು. ಈ ಕುರಿತಂತೆ ಡಿ.ಕೆ.ರವಿ ತಾಯಿ ಅವರೂ ಸಹ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. ಆದರೆ, ಇದು ಒಬ್ಬ ವ್ಯಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಚಿತ್ರ ಅಲ್ಲ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ. ನೀನಾಸಂ ಸತೀಶ್, ಸೋನುಗೌಡ, ಕಿಶೋರ್, ರೋಜರ್ ನಾರಾಯಣ್, ಅಚ್ಯುತಕುಮಾರ್, ಸರ್ದಾರ್ ಸತ್ಯ, ಮಹಂತೇಶ್ ಮುಂತಾದವರ ತಾರಾಬಳಗ ಈ ಸಿನಿಮಾದಲ್ಲಿದೆ. 

  • News18
  • |
First published: