ಬಾಲಿವುಡ್‌ನಲ್ಲಿ ಕನ್ನಡದ ಪ್ರತಿಭಾವಂತ ಟೆಕ್ನಿಷಿಯನ್‌ಗಳಿಗೆ ಬೆಲೆ ಇದೆ. ದಕ್ಷಿಣದ ಪ್ರತಿಭಾವಂತರಿಗೆ ಇಲ್ಲಿ ಅವಕಾಶಗಳು ಜಾಸ್ತಿ ಆಗಿವೆ. ಕೆಜಿಎಫ್ ಚಿತ್ರ ಆದ್ಮೇಲೆ ಕನ್ನಡದ ಮಂದಿಗೂ ಇಲ್ಲಿ ಅತಿ ಹೆಚ್ಚು ಚಾನ್ಸ್ ಸಿಕ್ಕಿವೆ. ಆ್ಯಕ್ಷನ್ ವಿಷಯದಲ್ಲಿ ರವಿ ವರ್ಮ ಶಾರುಖ್ ಜೊತೆಗೂ ಸಿನಿಮಾ ಮಾಡಿದ್ದಾರೆ. ಈಗ ಸಂಗೀತದ ವಿಷಯದಲ್ಲಿ ರವಿ ಬಸ್ರೂರು ಅವರಿಗೆ ಇಲ್ಲಿ ಬೇಡಿಕೆ ಹೆಚ್ಚಿದೆ.