Actor Diganth: ಸೈಕ್ಲಿಂಗ್, ಸರ್ಫಿಂಗ್, ಟ್ರಕ್ಕಿಂಗ್ ದೂದ್ಪೇಡಾ ದಿಗಂತ್ ಇಷ್ಟ-ಕಷ್ಟಗಳು ಇವಂತೆ
ದಿಗಂತ್ಗೆ ಪ್ರಕೃತಿ ಎಂದರೆ ಬಲು ಇಷ್ಟ. ಹೆಚ್ಚು ಸೈಕ್ಲಿಂಗ್ ಮಾಡುವ ಇವರು ನಟ ಪುನೀತ್ ರಾಜ್ಕುಮಾರ್ಗೂ ಸೈಕ್ಲಿಂಗ್ ಹುಚ್ಚು ಹಿಡಿಸಿದ್ರಂತೆ. ಯುವ ರತ್ನ ಸಿನಿಮಾ ಶೂಟಿಂಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಸೈಕಲ್ನಲ್ಲೇ ಸವಾರಿ ಮಾಡುತ್ತಿದ್ದರಂತೆ. (Photo Crdits diganthmanchale Instapage)
ಗಾಳಿಪಟದಲ್ಲಿ ಮುದ್ದು ಮುದ್ದಾಗಿದ್ದ ನಟ ದಿಂಗತ್ ಚಾಕೋಲೆಟ್ ಬಾಯ್, ಸಿನಿಮಾಗಳ ಹೊರತಾಗಿ ಪ್ರಕೃತಿ, ಕುಟುಂಬದ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ.
2/ 10
ನಟ ದಿಗಂತ್ ಕ್ರೀಡಾ ಚಟುವಟಿಕೆಯಲ್ಲಿ ಸದಾ ಮುಂದು, ಸೈಕಲಿಂಗ್, ಟ್ರಕ್ಕಿಂಗ್, ಸರ್ಫಿಂಗ್ನಂತ ಕ್ರೀಡಾ ಚಟುವಟಿಕೆಯಲ್ಲಿ ಸದಾ ತೊಡಗಿರುತ್ತಾರೆ. ಇದು ಅವರ ಆರೋಗ್ಯದ ಗುಟ್ಟು ಕೂಡ.
3/ 10
ನಟ ದಿಗಂತ್ಗೆ ಪ್ರಕೃತಿ ಎಂದರೆ ಬಲು ಇಷ್ಟ. ಹೆಚ್ಚು ಸೈಕ್ಲಿಂಗ್ ಮಾಡುವ ಇವರು ನಟ ಪುನೀತ್ ರಾಜ್ಕುಮಾರ್ಗೂ ಸೈಕಲ್ ಹುಚ್ಚು ಹಿಡಿಸಿದ್ರಂತೆ. ಯುವ ರತ್ನ ಸಿನಿಮಾ ಶೂಟಿಂಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಸೈಕಲ್ನಲ್ಲೇ ಸವಾರಿ ಮಾಡುತ್ತಿದ್ದರಂತೆ
4/ 10
ದಿಗಂತ್ಗೆ ಎಷ್ಟರ ಮಟ್ಟಿಗೆ ಸೈಕ್ಲಿಂಗ್ ಹುಚ್ಚು ಎಂದರೆ, ಅವರು ಸಿನಿಮಾ ಶೂಟಿಂಗ್ ಬೆಂಗಳೂರಿನಿಂದ ಮೈಸೂರಿನವರೆಗೆ ಸೈಕಲ್ನಲ್ಲೇ ಹೋಗುತ್ತಿದ್ದರಂತೆ. ಯುವರತ್ನ ಚಿತ್ರದಲ್ಲಿ ದಿಗಂತ್ ಸೈಕಲ್ ಪ್ರೇಮದಿಂದ ನಟ ಪುನೀತ್ ಕೂಡ ಹುಮ್ಮಸ್ಸು ಪಡೆದಿದ್ರಂತೆ. ಈ ಬಗ್ಗೆ ಪುನೀತ್ ಕೂಡ ಈ ಹಿಂದೆ ಸಂದರ್ಶನದಲ್ಲಿ ತಿಳಿಸಿದ್ರು.
5/ 10
ಅಪ್ಪಟ್ಟ ಮಲೆನಾಡಿನ ಹುಡುಗನಾದ ದಿಗಂತ್ ಒಂದೇ ರೀತಿಯ ಪಾತ್ರಕ್ಕೆ ಸಿಮೀತರಾಗಿಲ್ಲ. ಹುಡುಗಿಯರ ಮೆಚ್ಚಿನ ನಟನಾಗಿರುವ ಅವರು, ಭಿನ್ನ ಭಿನ್ನದ ಪಾತ್ರಗಳ ಮೂಲಕ ಎಲ್ಲ ಪಾತ್ರ ಮಾಡಲು ಸೈ ಎಂದು ತೋರಿಸಿದ್ದಾರೆ.
6/ 10
ಗಾಳಿಪಟದ ದೂದ್ಪೇಡಾ ಆಗಿ, ಮನಸಾರೆಯ ಪ್ರೇಮಿಯಾಗಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲದ ಲೆಕ್ಕಾಚಾರದ ಅಡುಗೆ ವ್ಯಾಪಾರಿಯಾಗಿ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ.
7/ 10
ನಟಿ ಐಂದ್ರಿತಾ ಜೊತೆ ಸಪ್ತ ತುಳಿದ ನಟ ದಿಗಂತ್ಗೆ ನಾಯಿಗಳೆಂದರೂ ಪ್ರೇಮ. ಸದಾ ನಿಸರ್ಗದ ಮಡದಿಯೊಂದಿಗೆ ಕಾಲ ಕಳೆಯುವುದು ಇವರ ನೆಚ್ಚಿನ ಹವ್ಯಾಸ ಎಂದ್ರೆ ತಪ್ಪಾಗಲಾರದು.
8/ 10
ಸ್ಯಾಂಡಲ್ವುಡನ ಈ ಸ್ಟಾರ ದಂಪತಿಗೆ ಡ್ರಗ್ಸ್ ಜಾಲದ ನಂಟು ಕೇಳಿ ಬಂದಿದ್ದರು. ಬಳಿಕ ಅದು ಪ್ರಕರಣವೊಂದರ ವಿಚಾರಣೆ ಅಷ್ಟೇ. ಇದಕ್ಕೂ ಅವರಿಗೂ ಸಂಬಂಧ ಇಲ್ಲ ಎಂಬುದು ಬಳಿಕ ಸ್ಪಷ್ಟವಾಗಿತ್ತು.
9/ 10
ಪಂಚರಂಗಿ, ಮನಸಾರೆ, ಲೈಫ್ ಇಷ್ಟೇನೆ, ಯುವರತ್ನ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿರುವ ಅವರು ಸಿನಿಮಾ ಕ್ಷೇತ್ರಕ್ಕೆ ಬಂದು 10 ವರ್ಷಗಳು ಕಳೆದಿವೆ.
10/ 10
ಸಿನಿಮಾ ಜೊತೆ ಜೊತೆಯಲ್ಲೂ ಮಾಡೆಲಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ ಅವರು. ಸಿಕ್ಕಾಪಟ್ಟೆ ಪ್ರವಾಸ ಮಾಡುತ್ತಾರೆ. ಬ್ಯಾಡ್ಮಿಂಟನ್, ರಾಕ್ ಕ್ಲೈಬಿಂಗ್ ಸಾಹಸದ ಕುರಿತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.