ಲವ್-360 ಚಿತ್ರವೂ ವಿಶೇಷವಾಗಿಯೇ ಇತ್ತು ಈ ಚಿತ್ರದ ಜಗವೇ ನೀನು ಹಾಡು ಸೂಪರ್ ಹಿಟ್ ಆಗಿತ್ತು. ಜನರ ಮನದಲ್ಲಿ ಈಗಲೂ ವಿಶೇಷ ಜಾಗ ಮಾಡಿಕೊಂಡ ಈ ಹಾಡನ್ನ ಚಿತ್ರದ ಡೈರೆಕ್ಟರ್ ಶಶಾಂಕ್ ಅವರೇ ಬರೆದಿದ್ದರು. ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದರು. ಗಾಯಕ ಸಿದ್ ಶ್ರೀರಾಮ್ ತಮ್ಮ ವಿಶೇಷ ಕಂಠಸಿರಿಯಿಂದಲೇ ಇದಕ್ಕೆ ಜೀವ ತುಂಬಿದ್ದರು. ನವ ನಟ ಪ್ರವೀಣ್ ಹಾಗೂ ನಟಿ ರಚನಾ ಇಂಧರ್ ಈ ಚಿತ್ರದಲ್ಲಿ ಅಭಿನಯಸಿದ್ದರು.
ಮಾನ್ಸೂನ್ ರಾಗ್ ಕಂಪ್ಲೀಟ್ ಸಂಗೀತಮಯ ಚಿತ್ರವೇ ಆಗಿತ್ತು. ಈ ಚಿತ್ರದ ಪ್ರತಿ ಸೀನ್ನಲ್ಲೂ ಅದ್ಭುತ ಸಂಗೀತವೇ ಇತ್ತು. ಚಿತ್ರದ ಪ್ರತಿ ಹಾಡುಗಳಲ್ಲೂ ಒಳ್ಳೆ ಫೀಲ್ ಇತ್ತು. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಒಳ್ಳೆ ಹಾಡುಗಳನ್ನೆ ಮಾಡಿದ್ದರು. ಅದರಲ್ಲೂ "ರಾಗಸುಧಾ" ಹಾಡು ಸೂಪರ್ ಹಿಟ್ ಆಗಿದೆ. ತುಳು ಭಾಷೆಯ ಈ ಗೀತೆಯನ್ನ ಟಿ.ಎಸ್.ಗಣೇಶ್ ಉಪಾಧ್ಯಾಯ ಬರೆದಿದ್ದಾರೆ. ಎಸ್ .ರವೀಂದ್ರನಾಥ್ ನಿರ್ದೇಶನದ ಈ ಚಿತ್ರ ಹಾಡುಗಳ ಮೂಲಕವೂ ಹೆಚ್ಚು ಸೆಳೆದಿತ್ತು.
ಗುರು ಶಿಷ್ಯರು ಚಿತ್ರದ ಆಣೆ ಮಾಡಿ ಹೇಳ್ತಿನಿ ಹಿಟ್ ಆಗಿದೆ. ಈ ಮೂಲಕ ನಟಿ ನಿಶ್ವಿಕಾ ನಾಯ್ಡು ಕೂಡ ಮನೆ ಮಾತಾಗಿದ್ದರು. ಹಾಸ್ಯ ನಾಯಕ ನಟ ಶರಣ್ ಅಭಿನಯದ ಈ ಚಿತ್ರದಲ್ಲಿ ಆಣೆ ಮಾಡಿ ಹೇಳ್ತಿನಿ ಹಾಡು ಸಾಕಷ್ಟು ಗಮನ ಸೆಳೆಯಿತು. ಈ ಹಾಡು ಕೂಡ ವೈರಲ್ ಆಗಿತ್ತು. ರೀಲ್ಸ್ ಗಳಲ್ಲಿ ಈ ಹಾಡಿಗೂ ಈಗಲೂ ಬೇಡಿಕೆ ಇದೆ. ಅಜನೀಶ್ ಲೋಕನಾಥ್ ಸಂಗೀತದ ಈ ಗೀತೆಯನ್ನ ವಿಜಯ್ ಪ್ರಕಾಶ್ ಮತ್ತು ಹರ್ಷಿಕಾ ದೇವದತ್ ಹಾಡಿದ್ದರು. ಪುನೀತ್ ಆರ್ಯ ಇದನ್ನ ಬೆರೆದಿದ್ದಾರೆ.
ದಿಲ್ ಪಸಂದ್ ಸಿನಿಮಾದ ರಾಮಾ ರಾಮಾ ರೇ ಹಾಡು ಗಮನ ಸೆಳೆದಿತ್ತು. ಈ ಹಾಡಿನಲ್ಲಿ ನಟಿ ನಿಶ್ವಿಕಾ ನಾಯ್ಡು ಮತ್ತು ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದರು. ಈ ಹಾಡಿನ ಮೂಲಕ ನಟಿ ಅನಿಶ್ವಿಕಾ ಸಖತ್ ಡ್ಯಾನ್ಸ್ ಕೂಡ ಮಾಡಿದ್ದರು. ತೆಲುಗು ಗಾಯಕಿ ಮಂಗ್ಲಿ ಹಾಡಿದ ಈ ಗೀತೆಗೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದರು. ಭರ್ಜರಿ ಚಿತ್ರ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಗೀತೆ ಬರೆದಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಹಾಡು ಗಮನ ಸೆಳೆಯುತ್ತಿದೆ.ಇದೇ ತಿಂಗಳ 23 ರಂದು ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಪಾಂಡವರಪುರದಲ್ಲಿ ರಿಲೀಸ್ ಆಗಿರೋ "ಗಿಲ್ಲಕ್ಕೋ ಶಿವ" ಹಾಡು ಗಮನ ಸೆಳೆಯುತ್ತಿದೆ. ಮಂಗ್ಲಿ ಹಾಡಿರೋ ಈ ಗೀತೆಯನ್ನ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಈ ಚಿತ್ರಕ್ಕೆ ಎ.ಹರ್ಷ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಹಾಡು ಕೂಡ ಸೂಪರ್ ಆಗಿತ್ತು. ಚಿತ್ರದ ಡೈರೆಕ್ಟರ್ ಚೇತನ್ ಕುಮಾರ್ ಈ ಗೀತೆಯನ್ನ ಬರೆದಿದ್ದರು. ರಚಿತಾ ರಾಮ್, ಆಶಿಕಾ ರಂಗನಾಥ್, ಸಂಗೀತ ನಿರ್ದೇಶಕರಾದ ಚಂದನ್ ಶೆಟ್ಟಿ, ಚರಣ್ ರಾಜ್ ಈ ಗೀತೆಯಲ್ಲಿದ್ದಾರೆ ಪವರ್ ಸ್ಟಾರ್ ಪುನೀತ್ ನೃತ್ಯವೂ ಅತಿ ಹೆಚ್ಚು ಗಮನ ಸೆಳೆದಿತ್ತು. ಚರಣ್ ರಾಜ್, ಅದಿತಿ ಸಾಗರ್ ಹೀಗೆ ಇನ್ನೂ ಅನೇಕರು ಈ ಗೀತೆಯನ್ನ ಹಾಡಿದ್ದಾರೆ.