Director Mansore Marriage: ಸ್ವಾತಂತ್ರ್ಯ ದಿನದಂದೇ ಹೊಸ ಬಾಳಿಗೆ ಕಾಲಿಟ್ಟ ಕನ್ನಡದ ನಿರ್ದೇಶಕ ಮಂಸೋರೆ
ಸ್ವಾತಂತ್ರ್ಯೋತ್ಸವದ ದಿನವೇ ಸ್ಯಾಂಡಲ್ ವುಡ್ನಲ್ಲಿ ಗಟ್ಟಿಮೇಳ ಮೇಳೈಸಿದೆ. ಚಂದನವನದ ನಿರ್ದೇಶನ ಮಂಸೋರೆ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅಖಿಲಾ ಅವರ ಜೊತೆ ಮಂಸೋರೆ ಇಂದು ಸಪ್ತಪದಿ ತುಳಿದಿದ್ದಾರೆ. ಹರಿವು, ನಾತಿಚರಾಮಿ, ಆಕ್ಟ್-1978 ಸಿನಿಮಾಗಳ ಖ್ಯಾತಿಯ ನಿರ್ದೇಶಕ ಮಂಸೋರೆ 75ನೇ ಸ್ವಾತಂತ್ರ ದಿನಾಚರಣೆಯ ದಿನವೇ ಮದುವೆ ಆಗಿದ್ದಾರೆ. ಮಂಸೋರೆ ನಿರ್ದೇಶನದ ನಾತಿಚರಾಮಿ ಚಿತ್ರಕ್ಕೆ 5 ರಾಷ್ಟ್ರಪ್ರಶಸ್ತಿಗಳು ಒಲಿದು ಬಂದಿದ್ದವು. ಸದ್ಯ ಅವರು ರಾಣಿ ಅಬ್ಬಕ್ಕ ಚಿತ್ರದಲ್ಲಿ ನಿರತರಾಗಿದ್ದಾರೆ.