The Elephant Whisperers: ಆಸ್ಕರ್ ವಿಜೇತ ಡಾಕ್ಯುಮೆಂಟರಿಯಲ್ಲಿ ಕನ್ನಡ ಮಾತು
ದಿ ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿ ಆಸ್ಕರ್ ಗೆದ್ದುಕೊಂಡಿದೆ. ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಇದರಲ್ಲಿ ಕನ್ನಡ ಡೈಲಾಗ್ ಕೂಡಾ ಇದೆ ಎನ್ನುವುದು ನಿಮಗೆ ಗೊತ್ತಾ?
ಆಸ್ಕರ್ ಅವಾರ್ಡ್ ಗೆದ್ದಿರುವ ದಿ ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ಆಗಿ ಗುರುತಿಸಿಕೊಂಡಿರುವ ಈ ಕಂಟೆಂಟ್ ವೈರಲ್ ಆಗಿದೆ.
2/ 10
ಬಾ ಇಲ್ಲಿ, ಬನ್ನಿ ಇಲ್ಲಿಗೆ, ಬನ್ನಿ ಬನ್ನಿ ಎಂದು ಆನೆಯನ್ನು ಕರೆಯುವ ದೃಶ್ಯವೊಂದು ಈ ಡಾಕ್ಯುಮೆಂಟರಿ ಚಿತ್ರದಲ್ಲಿದೆ.
3/ 10
ಆಸ್ಕರ್ ಗೆದ್ದ ಶಾರ್ಟ್ ಡಾಕ್ಯುಮೆಂಟರಿ ದಿ ಎಲಿಫೆಂಟ್ ವಿಸ್ಪರ್ಸ್ ಅನ್ನು ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿರುವ ಮದುಮಲೈನ ತೆಪ್ಪಕಾಡು ಎಲಿಫೆಂಟ್ ಕ್ಯಾಂಪ್ನಲ್ಲಿ ಚಿತ್ರೀಕರಿಸಲಾಗಿದೆ.
4/ 10
ಮದುಮಲೈ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ತೆಪ್ಪಕಾಡು ಎಲಿಫೆಂಟ್ ಕ್ಯಾಂಪ್ ಏಷ್ಯಾದಲ್ಲಿಯೇ ಅತ್ಯಂತ ಹಳೆಯ ಆನೆ ಕ್ಯಾಂಪ್. ಇದನ್ನು 105 ವರ್ಷ ಹಿಂದೆ ಆರಂಭಿಸಲಾಗಿದೆ.
5/ 10
ಇದು ಮೋಯರ್ ನದಿ ತೀರದಲ್ಲಿದ್ದು ಅಲ್ಲಿ 28 ಮಾವುತರಿದ್ದಾರೆ. ಅವರು ಆನೆಗಳಿಗೆ ತರಬೇತಿ ಕೊಟ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
6/ 10
ಕಾರ್ತಿಕಿ ಗೋನ್ಸಲ್ವೆಸ್ ಅವರು 5 ವರ್ಷಗಳ ಕಾಲ ಈ ಡಾಕ್ಯುಮೆಂಟರಿ ಶೂಟ್ ಮಾಡಲು ಮದುಮಲೈನಲ್ಲಿ ತಂಗಿದ್ದರು. ಅಂತೂ ಈ ಡಾಕ್ಯುಮೆಂಟರಿ ಅವರಿಗೆ ಆಸ್ಕರ್ ಗೆಲ್ಲಿಸಿಕೊಟ್ಟಿದೆ.
7/ 10
41 ನಿಮಿಷಗಳ ಈ ಡಾಕ್ಯುಮೆಂಟರಿ ಅನಾಥ ಆನೆ ರಘು ಹಾಗೂ ಅದರ ಮಾವುತ ದಂಪತಿ ಬೊಮ್ಮನ್ ಹಾಗೂ ಬೆಳ್ಳಿಯ ಸುಂದರವಾದ ಸಂಬಂಧದ ಕಥೆಯನ್ನು ಬಿಚ್ಚಿಡುತ್ತದೆ.
8/ 10
ಮದುಮಲೈನಲ್ಲಿ ಕಾಟುನಾಯಕನ ಟ್ರೈಬ್ನ ಜನರು ವಾಸಿಸುತ್ತಿದ್ದಾರೆ. ಬೊಮ್ಮನ್ ಹಾಗೂ ಬೆಳ್ಳಿ ಕೂಡಾ ಇದೇ ಸಮುದಾಯದವರು.
9/ 10
ಈ ಡಾಕ್ಯುಮೆಂಟರಿಯ ದೃಶ್ಯಗಳು ವೈರಲ್ ಆಗುತ್ತಿವೆ. ಟ್ವಿಟರ್ನಲ್ಲಿ ಇದಕ್ಕೆ ಸಂಬಂಧಿಸಿದ ಫೋಟೋಗಳು ಕೂಡಾ ಎಲ್ಲೆಡೆ ವೈರಲ್ ಆಗಿದೆ.
10/ 10
ಬೊಮ್ಮನ್ ಹಾಗೂ ಬೆಳ್ಳಿ ಅನಾಥ ಆನೆಯನ್ನು ತಮ್ಮ ಮಗುವಿನಂತೆಯೇ ಸಾಕಿ ಸಲಹುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅವರ ನಡುವಿನ ಸಂಬಂಧ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
First published:
110