ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
2/ 7
ರೂಪೇಶ್ ಶೆಟ್ಟಿ ಅಭಿನಯದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಗೀತಾ ಭಾರತಿ ಭಟ್ ಹಾಗೂ ಪಂಚಮಿ ರಾವ್ ಈ ಚಿತ್ರದಲ್ಲಿ ರೂಪೇಶ್ಗೆ ಜೋಡಿ ಆಗಿದ್ದಾರೆ.
3/ 7
ಮಂಕು ಭಾಯ್ ಫಾಕ್ಸಿ ರಾಣಿ ಮೂಲಕವೇ ನವ ನಟಿ ಪಂಚಮಿ ರಾವ್ ಇಂಡಸ್ಟ್ರೀಗೆ ಕಾಲಿಟ್ಟಿದ್ದಾರೆ. ಇದು ಇವರ ಮೊದಲ ಸಿನಿಮಾನೇ ಆಗಿದೆ.
4/ 7
ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೆ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಈ ಚಿತ್ರ ಚಿತ್ರೀಕರಣ ಆಗಿದೆ. ಆದರೆ ಈಗ ಈ ಚಿತ್ರ ರಿಲೀಸ್ಗೆ ರೆಡಿ ಆಗಿದೆ.
5/ 7
ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಪಾತ್ರವನ್ನೆ ಮಾಡಿದ್ದಾರೆ. ಇಲ್ಲಿ ಕಥೆನೆ ಹೀರೋ ಅಂತಲೇ ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.
6/ 7
ಗೀತಾ ಭಾರತಿ ಭಟ್ ಇಲ್ಲಿವರೆಗೂ ಸಪೋರ್ಟಿಂಗ್ ಪಾತ್ರಗಳನ್ನೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಚಿತ್ರದಲ್ಲಿ ಗೀತಾ ಲೀಡ್ ರೋಲ್ ಮಾಡಿದ್ದಾರೆ. ಆ ಖುಷಿಯನ್ನ ಕೂಡ ಈಗ ಹಂಚಿಕೊಂಡಿದ್ದಾರೆ.
7/ 7
ರೂಪೇಶ್ ಶೆಟ್ಟಿ ಅಭಿನಯದ ಈ ಚಿತ್ರ ಇದೇ ತಿಂಗಳು 13 ರಂದು ರಿಲೀಸ್ ಆಗುತ್ತಿದೆ. ಗಗನ್ ಎಂ. ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಕನ್ನಡದ ಈ ಚಿತ್ರಕ್ಕೆ ವಿನ್ಯಾಸ್ ಮಧ್ಯ ಹಾಗೂ ಶಮೀರ್ ಮುಡಿಪು ಸಂಗೀತ ಕೊಟ್ಟಿದ್ದಾರೆ. ಸದ್ಯ ಕಲಾವಿದರ ಸಂಘದಲ್ಲಿ ಚಿತ್ರದ ಟ್ರೈಲರ್ ಈಗ ರಿಲೀಸ್ ಆಗಿದೆ.