ಜೂನಿಯರ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಡೈರೆಕ್ಟರ್ ದುನಿಯಾ ಸೂರಿ ನಿರ್ದೇಶನದಲ್ಲಿ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಬ್ಯಾಡ್ ಮ್ಯಾನರ್ಸ್ ಸಿನಿಮಾ ವಿಶೇಷವಾಗಿಯೇ ಇದೆ. ಚಿತ್ರದ ಮೊದಲ ಟೀಸರ್ ಸೂಪರ್ ಆಗಿಯೇ ಬಂದಿತ್ತು. ಜನಕ್ಕೆ ಈ ಟೀಸರ್ ಬಲು ಇಷ್ಟ ಕೂಡ ಆಗಿತ್ತು. ದುನಿಯಾ ಸೂರಿ ಈ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ರನ್ನ ಇಲ್ಲಿ ವಿಶೇಷವಾಗಿಯೇ ತೋರಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ರಗಢ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಸಿನಿಮಾಕ್ಕೆ ಚರಣ್ರಾಜ್ ಸಂಗೀತ ಇದೆ. ಶೇಖರ್. ಎಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಖಡಕ್ ಡೈಲಾಗ್ಗಳನ್ನ ಹೊಡೆದಿದ್ದಾರೆ. ಹೆಸರಾಂತ ಡೈಲಾಗ್ ರೈಟರ್ ಮಾಸ್ತಿ ಈ ಚಿತ್ರಕ್ಕೆ ಡೈಲಾಗ್ ಬರೆದುಕೊಟ್ಟಿದ್ದಾರೆ. ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಕೆಲಸ ಮುಗಿಸಿಕೊಂಡಿರೋ ದುನಿಯಾ ಸೂರಿ ಅವ್ರು, ಅತಿ ಶೀಘ್ರದಲ್ಲಿಯೇ ಸಿನಿಮಾ ಹಾಡುಗಳ ಮಾಹಿತಿಯನ್ನ ಕೂಡ ಕೊಡಲಿದ್ದಾರೆ.