ಕನ್ನಡ ಸ್ಟಾರ್ ಆ್ಯಂಕರ್ ಅನುಶ್ರೀ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಕನ್ನಡ ಟಾಪ್ ನಿರೂಪಕಿ ಇಂದು 35ನೇ ವರ್ಷದ ಬರ್ತ್ ಆಚರಿಸುತ್ತಿದ್ದಾರೆ.
2/ 9
ಈ ಸಂದರ್ಭದಲ್ಲಿ ಅನುಶ್ರೀ ಅವರ ಕೆಲವು ಸುಂದರವಾದ ಸೀರೆ ಲುಕ್ ನೋಡಿ. ಅವರು ಸುಂದರವಾಗಿ ವಿವಿಧ ವಿನ್ಯಾಸದ ಸೀರೆ ಉಟ್ಟ ಫೋಟೋಸ್ ಇಲ್ಲಿವೆ.
3/ 9
ನಟಿ ಮೆರೂನ್ ಕಲರ್ ಸೀರೆ ಉಟ್ಟು ಕಾಲರ್ ಬ್ಲೌಸ್ ಧರಿಸಿ ಸಖತ್ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ನಟಿ ಪೋನಿಟೇಲ್ ಮಾಡಿದ್ದು ಸುಂದರವಾಗಿ ಸ್ಮೈಲ್ ಕೊಟ್ಟಿದ್ದಾರೆ.
4/ 9
ಇನ್ನೊಂದರಲ್ಲಿ ನಟಿ ಡಿಸೈನರ್ ರೆಡ್ ಕಲರ್ ಸೀರೆ ಉಟ್ಟಿದ್ದು ಇದಕ್ಕೆ ಮ್ಯಾಚಿಂಗ್ ಕೆಂಪು ಬಳೆಗಳನ್ನು ಧರಿಸಿದ್ದರು. ಬ್ರೈಟ್ ರೆಡ್ ಲಿಪ್ಸ್ಟಿಕ್ ಅವರ ಲುಕ್ ಕಂಪ್ಲೀಟ್ ಮಾಡಿದೆ.
5/ 9
ಗೋಟಾಪಟ್ಟಿ ಇಟ್ಟಂತಹ ಸುಂದರವಾ ಕೆಂಪು ಬಣ್ಣದ ಲಂಗ ದಾವಣಿಯಲ್ಲಿ ಅನುಶ್ರೀ ವಧುವಿನಂತೆ ಮಿಂಚಿದ್ದಾರೆ. ಗ್ರ್ಯಾಂಡ್ ಇಯರಿಂಗ್ಸ್ ಹಾಗೂ ನೆತ್ತಿಬೊಟ್ಟು ಧರಿಸಿದ್ದು, ಮ್ಯಾಚಿಂಗ್ ಬಳೆ ಕೂಡಾ ಇತ್ತು. ಕೆಂಪು ದಾವಣಿಗೆ ಆರೆಂಜ್ ಸ್ಕರ್ಟ್ ಧರಿಸಿದ್ದರು.
6/ 9
ಆ್ಯಂಕರ್ ಅನುಶ್ರೀ ಅವರಿಗೆ ರೆಡ್ ಕಲರ್ ಸಿಕ್ಕಾಪಟ್ಟೆ ಫೇವರಿಟ್ ಎನ್ನುವಂತಿದೆ. ನಟಿಯ ಹೆ್ಚಿನ ಡ್ರೆಸ್ ಕೆಂಪು ಬಣ್ಣದಲ್ಲಿಯೇ ಇದೆ.
7/ 9
ಆರೆಂಜ್ ಕಲರ್ ಲಂಗ ದಾವಣಿ ಧರಿಸಿದ್ದ ನಟಿ ಅದಕ್ಕೆ ಗ್ರ್ಯಾಂಡ್ ಜ್ಯುವೆಲ್ಸ್ ಧರಿಸಿದ್ದರು. ಸೊಂಟಪಟ್ಟಿ, ಬಳೆ, ಹಾರ, ಇಯರಿಂಗ್ಸ್ ಎಲ್ಲವೂ ಮ್ಯಾಚಿಂಗ್ ಇತ್ತು.
8/ 9
ಇನ್ನೊಂದರಲ್ಲಿ ಇಳ್ಕಲ್ ಸೀರೆ ಉಟ್ಟುಕೊಂಡಿದ್ದರು. ಹಸಿರು ಬಣ್ಣದ ಈ ಸೀರೆಗೆ ನಟಿ ಹಸಿರು ಹರಳಿನ ಉಂಗುರವನ್ನೂ ಧರಿಸಿದ್ದರು. ಕೆಂಪು ಬಣ್ಣದ ಬಿಂದಿ ಇಟ್ಟಿದ್ದರು.
9/ 9
ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ.