Agnisakshi Serial: ಹಿಂದಿಗೆ ರಿಮೇಕ್ ಆಗಿದೆ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಎಷ್ಟು ಹಿಟ್ ಆಗಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಆ ಧಾರಾವಾಹಿಯನ್ನು ಮಿಸ್ ಮಾಡಿಕೊಂಡವರೇ ಇಲ್ಲ. ಈಗ ಆ ಧಾರಾವಾಹಿ ಹಿಂದಿಗೆ ರಿಮೇಕ್ ಆಗಿದೆ.
ಹಿಂದಿ ಸೀರಿಯಲ್ ಗಳು, ಹಿಂದಿ ರಿಯಾಲಿಟಿ ಶೋಗಳು ಕನ್ನಡಕ್ಕೆ ರಿಮೇಕ್ ಆಗೋದನ್ನು ನೋಡಿದ್ವಿ. ಈಗ ಕನ್ನಡ ಜನಪ್ರಿಯ ಧಾರಾವಾಹಿ ಹಿಂದಿಗೆ ರಿಮೇಕ್ ಆಗಿದೆ.
2/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಎಷ್ಟು ಹಿಟ್ ಆಗಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಆ ಧಾರಾವಾಹಿಯನ್ನು ಮಿಸ್ ಮಾಡಿಕೊಂಡವರೇ ಇಲ್ಲ. ಈಗ ಆ ಧಾರಾವಾಹಿ ಹಿಂದಿಗೆ ರಿಮೇಕ್ ಆಗಿದೆ.
3/ 8
7 ವರ್ಷಗಳ ಕಾಲ ಕಿರುತೆರೆಯಲ್ಲಿ ತನ್ನದೇ ಹವಾ ಸೃಷ್ಟಿಸಿದ್ದ ಧಾರಾವಾಹಿ ಅಂದ್ರೆ ಅಗ್ನಿಸಾಕ್ಷಿ. ಪ್ರತಿ ದಿನ ರಾತ್ರಿ 8 ಗಂಟೆಗೆ ಮನೆ ಮಂದಿಯೆಲ್ಲಾ ಮಿಸ್ ಮಾಡ್ದೇ ನೋಡ್ತಾ ಇದ್ರು.
4/ 8
ನಟಿ ವೈಷ್ಣವಿ ಗೌಡ ಅವರಿಗೆ ಒಂದು ದೊಡ್ಡ ಬ್ರೇಕ್ ಕೊಟ್ಟಿದ್ದ ಸೀರಿಯಲ್. ಈ ಧಾರಾವಾಹಿ ಮೂಲಕ ಅವರು ಹೆಸರು ವಾಸಿಯಾಗಿದ್ದರು. ಸಿದ್ಧಾರ್ಥ್ -ಸನ್ನಿಧಿ ಜೋಡಿ ಸೂಪರ್ ಹಿಟ್ ಆಗಿತ್ತು.
5/ 8
ಈಗ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ ಹಿಂದಿಯಲ್ಲಿ ರಿಮೇಕ್ ಆಗಿದೆ. ಹಿಂದಿ ಅಂಗಳದಲ್ಲಿ ಕನ್ನಡದ ಕಂಪು ಹರಡಲಿದೆ. ಹಿಂದಿಯಲ್ಲಿ ಹೊಸ ಪ್ರತಿಭೆ ಜೀವಿಕಾ ರಾಣೆ ಸನ್ನಿಧಿ ಪಾತ್ರ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಪಾತ್ರವನ್ನು ಸಾತ್ವಿಕ್ ಭೋಸಲೆ ಮಾಡುತ್ತಿದ್ದಾರೆ.
6/ 8
ಹಿಂದಿಗೆ ತಕ್ಕಂತೆ ಪಾತ್ರಗಳನ್ನು ರೆಡಿ ಮಾಡಿದ್ದಾರೆ. ಕಲರ್ಸ್ ನಲ್ಲಿ ಕನ್ನಡದ ಅಗ್ನಿಸಾಕ್ಷಿ ಲವ್ ಕಹಾನಿ ಪ್ರಸಾರವಾಗಲಿದೆ. ಅಲ್ಲಿಯೂ ಈ ಧಾರಾವಾಹಿ ಮೆಚ್ಚುಗೆ ಗಳಿಸುತ್ತಿದೆ.
7/ 8
ಅಗ್ನಿಸಾಕ್ಷಿ ಏಕ್ ಸಮ್ಜೋತಾ ಎಂಬ ಟೈಟಲ್ನೊಂದಿಗೆ ಕಥೆ ಶುರುವಾಗಿದೆ. ಅದರಲ್ಲೂ ಇಬ್ಬರ ಮದುವೆ ಆಗಿದ್ದು, ನಟ ಮದುವೆ ಆದ ತಕ್ಷಣ ಡಿವೋರ್ಸ್ ಕೇಳಲು ಮುಂದಾಗಿದ್ದಾನೆ.
8/ 8
ಮೊದಲು ಬೇರೆ ಭಾಷೆಗಳ ಸೀರಿಯಲ್ ಗಳು ನಮ್ಮಲ್ಲಿ ಬರುತ್ತಿದ್ದವು. ಈಗ ನಮ್ಮ ಹೆಮ್ಮೆ ಕನ್ನಡ ಎಲ್ಲೆಲ್ಲೂ ತನ್ನ ಕಂಪು ಹರಡುತ್ತಿದೆ.