ಸ್ಯಾಂಡಲ್ವುಡ್ ಬೆಡಗಿ ಶ್ರದ್ಧಾ ಶ್ರೀನಾಥ್ ಸದ್ಯ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಭರತ್ ನೀಲಕಂಠನ್ ಅವರೇ ಕತೆ ಬರೆದು ನಿರ್ದೇಶಿಸಿರುವ ಈ 'ಕೆ 13' ಮಿಸ್ಟರಿ ಥ್ರಿಲ್ಲರ್ ಚಿತ್ರದಲ್ಲಿ ಅರುಳ್ನಿಧಿಗೆ ಜೋಡಿಯಾಗಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ. ಇವರೊಂದಿಗೆ ನಟ ಯೋಗಿ ಬಾಬು ಸೇರಿದಂತೆ ಇತರರ ತಾರಾಬಳಗವಿದೆ. ಸ್ಯಾಮ್ ಸಿ.ಎಸ್. ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಕೆಲವು ಸ್ಟಿಲ್ಸ್ ಇಲ್ಲಿವೆ.