ತತ್ಸಮ ತದ್ಭವ ಸಿನಿಮಾದಲ್ಲಿ ನಟಿ ಶೃತಿ ಅವರು ಸೈಕಾಲಜಿಸ್ಟ್ ರೋಲ್ ಮಾಡಿದ್ದಾರೆ. ಈ ಮೂಲಕ ಹೊಸ ರೀತಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ಸದ್ಯಕ್ಕೆ ಸಿನಿಮಾದ ಶೂಟಿಂಗ್ ಪೂರ್ಣ ಆಗಿದೆ. ಚಿತ್ರಕ್ಕೆ ವಾಸುಕಿ ವೈಭವ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಂದು ಹಾಡಿದ್ದು, ಇದೀಗ ರೀರೆಕಾರ್ಡಿಂಗ್ ಕೆಲಸ ಕೂಡ ನಡೆಯುತ್ತಿದೆ.