Mayuri Wedding Photos: ಬಾಲ್ಯದ ಗೆಳೆಯನ ಜೊತೆ ಮಧ್ಯರಾತ್ರಿ ಸಿಂಪಲ್ ಆಗಿ ಹಸೆಮಣೆ ಏರಿದ ನಟಿ ಮಯೂರಿ!
ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಗೆ ಇಂದು ಕಂಕಣ ಭಾಗ್ಯ ಕೂಡಿ ಬಂದಿದೆ. ತಡರಾತ್ರಿ 2.30-3 ಗಂಟೆಯ ಮಹೂರ್ತದಲ್ಲಿ ಬಾಲ್ಯದ ಗೆಳೆಯ ಅರುಣ್ ಅವರನ್ನು ಮಯೂರಿ ವರಿಸಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮದುವೆ ಜರುಗಿದೆ. ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ.