ಗಾಳಿಪಟ ಚಿತ್ರ ಖ್ಯಾತಿಯ ಭಾವನಾ ರಾವ್ ಆ್ಯಕ್ಟಿವ್ ಆಗಿದ್ದಾರೆ. ಸಿನಿಮಾದ ಜೊತೆಗೆ ಫೋಟೋ ಶೂಟ್ ಗಳಲ್ಲೂ ಬ್ಯುಸಿ ಇರ್ತಾರೆ. ಭಾವನಾ ರಾವ್ ಇದೀಗ ಹೊಸ ರೀತಿಯ ಡ್ರೆಸ್ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಇದು ವಿಶೇಷವಾಗಿಯೇ ಇದೆ. ಭಾವನಾ ರಾವ್ ತಮ್ಮ ಈ ಫೋಟೋ ಶೂಟ್‌ನ ಒಂದಷ್ಟು ಫೋಟೋಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೂ ಹಂಚಿಕೊಂಡಿದ್ದಾರೆ. ಭಾವನಾ ಈ ಒಂದು ಫೋಟೋ ಶೂಟ್‌ಲ್ಲಿ ಧರಿಸಿರೋ ಡ್ರೆಸ್ ಹೆಸರು ಏನು ಗೊತ್ತೇ. ಹೌದು, ಈ ಡ್ರೆಸ್‌ಗ Cape dress ಕರೆಯುತ್ತಾರೆ. ಭಾವನಾ ತಮ್ಮ ಈ ಹೊಸ ಫೋಟೋ ಶೂಟ್‌ನ ವಿಡಿಯೋ ಮತ್ತು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಭಾವನಾ ರಾವ್ ಫೋಟೋ ಶೂಟ್ ಹಿಂದೆ ಒಂದು ನುರಿತ ತಂಡವೇ ಕೆಲಸ ಮಾಡಿದೆ. ಮೇಕ್‌ಅಪ್, ಡ್ರೆಸ್, ಸ್ಟೈಲ್ ಹೀಗೆ ಎಲ್ಲರೂ ಭಾವನಾ ರಾವ್ ಅವರಿಗೆ ಈ ಒಂದು ಹೊಸ ಲುಕ್ ಕೊಟ್ಟಿದ್ದಾರೆ. ಭಾವನಾ ರಾವ್ ತೊಟ್ಟ ಡ್ರೆಸ್‌ನ್ನ ಡಿಸೈನರ್ ಅಮಿತ್ ಅಗ್ರವಾಲ್ ಡಿಸೈನ್ ಮಾಡಿದ್ದಾರೆ. ಫೋಟೋಗ್ರಾಫರ್ ವಿಜೇತ್ ಅದ್ಭುತವಾಗಿಯೇ ಫೋಟೋ ತೆಗೆದಿದ್ದಾರೆ. ಮೇಕ್‌ಅಪ್ ಮ್ಯಾನ್ ಲಕ್ಷ್ಮಣ ಭಾವನಾ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿದ್ದಾರೆ