ಕನ್ನಡದ ಯುವ ನಟಿ ಐಶಾನಿ ಶೆಟ್ಟಿ ಲುಕ್ ಬದಲಾಗಿದೆ. ಹೇರ್ ಸ್ಟೈಲ್ ಕೂಡ ವಿಶೇಷವಾಗಿದೆ. ಈ ವಿಶೇಷ ಲುಕ್ ಇರೋ ಫೋಟೋ ಈಗ ಹೆಚ್ಚು ಗಮನ ಸೆಳೆಯುತ್ತಿವೆ. ಐಶಾನಿ ಶೆಟ್ಟಿ ಈ ಹೊಸ ಲುಕ್ ಈಗ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ವಿಶೇಷವಾಗಿದೆ. ತಮ್ಮ ಮುಂದಿನ ಚಿತ್ರದಲ್ಲಿ ಈ ಒಂದು ಹೊಸ ರೂಪದಲ್ಲಿ ಐಶಾನಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಐಶಾನಿ ಶೆಟ್ಟಿ ಈ ಒಂದು ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಹೇರ್ ಸ್ಟೈಲ್ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಹೊಂದಿಸಿ ಬರೆಯಿರಿ ಹೆಸರಿನ ಈ ಚಿತ್ರದಲ್ಲಿ ಐಶಾನಿ ಹೆಸರು ಕೂಡ ಸ್ಪೆಷಲ್ ಆಗಿದೆ. ಸನಿಹಾ ಪೊನ್ನಪ್ಪ ಅನ್ನೋ ಪಾತ್ರವನ್ನು ಐಶಾನಿ ಶೆಟ್ಟಿ ಇಲ್ಲಿ ನಿರ್ವಹಿಸುತ್ತಿದ್ದಾರೆ. ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಹೊಸಬರು ಅಭಿನಯಿಸಿದ್ದಾರೆ. ಹಳಬರೂ ಈ ಚಿತ್ರದಲ್ಲಿರೋದು ವಿಶೇಷವೇ ಆಗಿದೆ. ಐಶಾನಿ ಶೆಟ್ಟಿ ಅಭಿನಯದ ಈ ಚಿತ್ರದಲ್ಲಿ ನಟ ಪ್ರವೀಣ್ ತೇಜ್, ಗುಳ್ಟು ಚಿತ್ರದ ನಟ ನವೀನ್ ಶಂಕರ್, ಸಂಯುಕ್ತ ಹೊರನಾಡು, ಅರ್ಚನಾ ಜೋಯಿಸ್, ಭಾವನಾ ರಾವ್ ಅಭಿನಯಿಸಿದ್ದಾರೆ. ಹೊಂದಿಸಿ ಬರೆಯಿರಿ ಸಿನಿಮಾ ರಿಲೀಸ್ ಹಂತಕ್ಕೂ ಬಂದಿದೆ. ಮುಂದಿನ ತಿಂಗಳು ಫೆಬ್ರವರಿ-10 ರಂದು ರಿಲೀಸ್ ಆಗುತ್ತಿದೆ. ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.