ಸಿನಿಮಾ ಸ್ಟಾರ್ಸ್ ರಾಜಕೀಯಕ್ಕೆ ಎಂಟ್ರಿ ಕೊಡೋದು ಹೊಸ ವಿಚಾರ ಏನಲ್ಲ. ಆದರೂ ಕೆಲವು ನಟರ ರಾಜಕೀಯ ಪ್ರವೇಶ ಹೊಸ ಕುತೂಹಲಕ್ಕೆ ಕಾರಣವಾಗುತ್ತದೆ. ಸದ್ಯ ಸುದ್ದಿಯಲ್ಲಿರೋದು ನಟ ಅನಂತ್ ನಾಗ್.
2/ 8
ಸ್ಯಾಂಡಲ್ವುಡ್ ನಟ ಮಾಜಿ ಸಚಿವರೂ ಆಗಿದ್ದ ಅನಂತ್ ನಾಗ್ ಅವರು ಫೆಬ್ರವರ 22ರಂದು ಬಿಜೆಪಿ ಸೇರಲಿದ್ದಾರೆ. ಬಿಜೆಪಿ ಆಫೀಸ್ನಲ್ಲಿ ಸಂಜೆ 4.20ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಕಮಲ ಪಾಳಯಕ್ಕೆ ಸೇರಿಕೊಳ್ಳಲಿದ್ದಾರೆ.
3/ 8
ಶಾಸಕ, ಪರಿಷತ್ ಸದಸ್ಯರಾಗಿ ರಾಜಕೀಯ ಅನುಭವ ಇರುವಂತಹ ಅನಂತ್ ನಾಗ್, ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
4/ 8
ಹಿರಿಯ ನಟ ಪಕ್ಷವನ್ನು ಸೇರುವ ಸಂದರ್ಭ ಬಿಜೆಪಿಯ ಇತರ ಸಚಿವರೂ, ಪ್ರಮುಖ ನಾಯಕರೂ ಹಾಜರಿರಲಿದ್ದಾರೆ ಎಂದು ಹೇಳಲಾಗಿದೆ. ಅನಂತ್ ನಾಗ್ ಅವರು 2004ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
5/ 8
ವಿಧಾನಸಭೆ ಚುನಾವಣೆ ಸಮೀಪಿಸಿದ್ದು ಬಿಜೆಪಿ ಕೆಲಸ ಜೋರಾಗಿದೆ. ಪ್ರಧಾನಿ ಮೋದಿ, ಸಚಿವ ಅಮಿತ್ ಶಾ, ಜೆಪಿ ನಡ್ಡಾ ರಾಜ್ಯದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
6/ 8
ಮಂಡ್ಯದಲ್ಲಿ ಬಿಜೆಪಿ ಯುವ ಸಮಾವೇಶ ನಡೆಯಲಿದ್ದು, 50 ಸಾವಿರ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ ಎನ್ನಲಾಗಿದೆ.
7/ 8
ಇದೀಗ ಹಿರಿಯ ನಟ ಕೂಡಾ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದು ರಾಜಕೀಯದಲ್ಲಿ ಯಾವ ರೀತಿ ಮುಂದುವರಿಯಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
8/ 8
ನಟ ಅನಂತ್ ನಾಗ್ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ? ಟಿಕೆಟ್ ಸಿಗುತ್ತಾ? ಇತ್ಯಾದಿ ವಿಚಾರಗಳ ಬಗ್ಗೆ ಅವರ ಅಭಿಮಾನಿಗಳಲ್ಲಿಯೂ ಕುತೂಹಲ ಹೆಚ್ಚಾಗಿದೆ.
First published:
18
Anant Nag: ಸ್ಯಾಂಡಲ್ವುಡ್ ಹಿರಿಯ ನಟ ಅನಂತ್ ನಾಗ್ BJP ಸೇರ್ಪಡೆ