Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಯಾವುದೇ ನಟನ ಅಥವಾ ನಿರ್ದೇಶಕರ ಬಗ್ಗೆ ಸುದ್ದಿಯಲ್ಲಿಲ್ಲ. ಬದಲಾಗಿ ತಮ್ಮ ಕಟ್ಟಡವನ್ನು ನೆಲಸಮಗೊಳಿಸಿದ್ದರ ಬಗ್ಗೆ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

First published:

  • 18

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ಸಾಮಾನ್ಯವಾಗಿ ಈ ರಸ್ತೆ ಅಗಲೀಕರಣ, ಕಟ್ಟಡಗಳು ಅನಧಿಕೃತವಾಗಿದ್ದರೆ ಮಹಾ ನಗರಕ್ಕೆ ಸಂಬಂಧಪಟ್ಟ ಮಹಾನಗರ ಪಾಲಿಕೆಯವರು ಅಂತಹ ಕಟ್ಟಡಗಳನ್ನು ನೆಲಸಮಗೊಳಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಕೆಲವೊಂದು ಮಹಾನಗರ ಪಾಲಿಕೆಯ ಕೆಲಸಗಳಲ್ಲಿ ಈ ಕಟ್ಟಡಗಳನ್ನು ನೆಲಸಮಗೊಳಿಸಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಮೊದಲಿಗೆ ಬಂದು ಆ ನೆಲಸಮಗೊಳ್ಳುತ್ತಿರುವ ಕಟ್ಟಡಕ್ಕೆ ಎಷ್ಟು ಹಣವನ್ನು ಪರಿಹಾರವಾಗಿ ಆ ಬಿಲ್ಡಿಂಗ್ ಮಾಲೀಕರಿಗೆ ನೀಡಬೇಕು ಅಂತ ಲೆಕ್ಕ ಹಾಕುತ್ತಾರೆ.

    MORE
    GALLERIES

  • 28

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ಇದರ ಬಗ್ಗೆ ಈಗೇಕೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ವಿಷಯ ಏನೆಂದರೆ ಇಲ್ಲಿ ಒಬ್ಬ ನಟಿಯ ಬಿಲ್ಡಿಂಗ್ ಅನ್ನು ಮುಂಬೈಯಲ್ಲಿ ಮಹಾನಗರ ಪಾಲಿಕೆಯವರು ನೆಲಸಮಗೊಳಿಸಿದ್ದರಂತೆ. ಆಗ ನಟಿ ಆ ಬಿಲ್ಡಿಂಗ್ ನೆಲಸಮಗೊಳಿಸಿದ್ದಕ್ಕೆ ಸುಮಾರು 2 ಕೋಟಿ ರೂಪಾಯಿ ಪರಿಹಾರವನ್ನು ಸಹ ಕೇಳಿದ್ದರಂತೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ನಟಿ ಈಗ ತನಗೆ ಆ ಪರಿಹಾರದ ಹಣ ಬೇಡ ಅಂತ ಹೇಳುತ್ತಿದ್ದಾರೆ ನೋಡಿ.

    MORE
    GALLERIES

  • 38

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನೋಡಿ. ಈ ಬಾರಿ ಅವರು ಯಾವುದೇ ನಟನ ಅಥವಾ ನಿರ್ದೇಶಕರ ಬಗ್ಗೆ ಮಾತಾಡಿ ಸುದ್ದಿಯಲ್ಲಿಲ್ಲ. ಬದಲಾಗಿ ತಮ್ಮ ಕಟ್ಟಡವನ್ನು ನೆಲಸಮಗೊಳಿಸಿದ್ದರ ಬಗ್ಗೆ ಯಾರೂ ಸಹ ಊಹಿಸದ ಒಂದು ನಿರ್ಧಾರವನ್ನು ತೆಗೆದುಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

    MORE
    GALLERIES

  • 48

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ನಟಿ ಕಂಗನಾ ರಣಾವತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮುಂಬೈನಲ್ಲಿ ನೆಲಸಮಗೊಳಿಸಿದ ಅವರ ಆಸ್ತಿಗೆ ಯಾವುದೇ ಪರಿಹಾರವನ್ನು ಪಡೆದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಸೆಪ್ಟೆಂಬರ್ 2020 ರಲ್ಲಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ಅವರ ಒಂದು ಕಟ್ಟಡವನ್ನು (ಆಸ್ತಿಯನ್ನು) ಭಾಗಶಃ ನೆಲಸಮಗೊಳಿಸಿತು. ಅನಧಿಕೃತ ನಿರ್ಮಾಣದ ಆಧಾರದ ಮೇಲೆ ಈ ನೆಲಸಮಗೊಳಿಸುವ ಕೆಲಸ ನಡೆದಿತ್ತು.

    MORE
    GALLERIES

  • 58

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ "ನನಗೆ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ, ಅವರು ಮೌಲ್ಯಮಾಪಕರನ್ನು ಕಳುಹಿಸಬೇಕಾಗಿತ್ತು. ಆದ್ದರಿಂದ, ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ್ ಸಂಭಾಜಿ ಶಿಂಧೆ ಅವರನ್ನು ಭೇಟಿಯಾದೆ. ಆದರೆ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡ ಯಾವ ಪರಿಹಾರವನ್ನೂ ನಾನು ಬಯಸುವುದಿಲ್ಲ. ನನಗೆ ಹೆಚ್ಚಿನ ಪರಿಹಾರ ಬೇಕಾಗಿಲ್ಲ” ಅಂತ ಕಂಗನಾ ಈಗ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

    MORE
    GALLERIES

  • 68

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    "ನ್ಯಾಯಾಲಯವು ಸಹ ನನಗೆ ಪರಿಹಾರವನ್ನು ನೀಡಬೇಕು ಎಂದು ಹೇಳಿತ್ತು. ಆದರೆ ನಾನು ಹೇಳಿದಂತೆ, ಅವರು ಎಂದಿಗೂ ಮೌಲ್ಯಮಾಪಕರನ್ನು ಕಳುಹಿಸಲಿಲ್ಲ ಮತ್ತು ನಾನು ಅದರ ಬಗ್ಗೆ ತುಂಬಾ ಒತ್ತಾಯ ಮಾಡೋದಕ್ಕೆ ಹೋಗಲಿಲ್ಲ. ಏಕೆಂದರೆ ಇದು ತೆರಿಗೆದಾರರ ಹಣ ಎಂದು ನನಗೆ ತಿಳಿದಿದೆ ಮತ್ತು ನನಗೆ ಆ ಹಣ ಬೇಡ" ಎಂದು ನಟಿ ಹೇಳಿದರು.

    MORE
    GALLERIES

  • 78

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ಶಿವಸೇನೆ ರಾಜಕೀಯ ಪಕ್ಷದೊಂದಿಗೆ ಹೆಚ್ಚು ಪ್ರಚಾರ ಪಡೆದ ಸಂಘರ್ಷದ ಮಧ್ಯೆ ಕಂಗನಾ ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸಿದ ದಿನವೇ ಅವರ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು. ಆಗ ನಟಿಗೆ ನಂತರ ವೈ-ಪ್ಲಸ್ ಶ್ರೇಣಿಯ ಪೊಲೀಸ್ ಭದ್ರತೆಯೂ ಸಿಕ್ಕಿತ್ತು.

    MORE
    GALLERIES

  • 88

    Kangana Ranaut: ಬಿಲ್ಡಿಂಗ್ ನೆಲಸಮ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿದ್ದ ಕಂಗನಾಗೆ ಆ ಹಣ ಈಗ ಬೇಡ್ವಂತೆ!

    ತನ್ನ ಆಸ್ತಿಯನ್ನು ನೆಲಸಮಗೊಳಿಸಿದ ನಂತರ, ಕಂಗನಾ ಬಾಂಬೆ ಹೈಕೋರ್ಟ್ ನ ಮೆಟ್ಟಿಲನ್ನು ಹತ್ತಿದ್ದರು ಮತ್ತು ನೆಲಸಮ ಕಾರ್ಯಾಚರಣೆಗೆ ತಡೆಯಾಜ್ಞೆ ಸಹ ಪಡೆದಿದ್ದರು. ತನ್ನ ಬಂಗಲೆಯನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆ ಎಂದು ಉಲ್ಲೇಖಿಸಿ ಕಂಗನಾ ಬಿಎಂಸಿಯಿಂದ 2 ಕೋಟಿ ರೂಪಾಯಿಗಳ ಪರಿಹಾರವನ್ನು ಕೋರಿದ್ದರು. ಆದರೆ ಈಗ ಯಾವುದೇ ಪರಿಹಾರ ನನಗೆ ಬೇಡ ಎಂದಿದ್ದಾರೆ.

    MORE
    GALLERIES