Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

Kangana Ranaut Mother: ಬಾಲಿವುಡ್ ಕ್ವೀನ್ ಎಂದು ಕರೆಯಲ್ಪಡುವ ಕಂಗನಾ ರಣಾವತ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ತಮ್ಮ ಪೋಸ್ಟ್ಗಳಿಂದಲೇ ಭಾರೀ ಸುದ್ದಿಯಾಗಿರುವ ಕಂಗನಾ, ಅನೇಕ ವಿವಾದಕ್ಕೂ ಸಿಲುಕಿದ್ದರು. ಇದೀಗ ತಾಯಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

First published:

  • 18

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ಬಾಲಿವುಡ್​ನಲ್ಲಿ ಕೊಂಚ ಭಿನ್ನವಾಗಿಯೇ ಕಾಣಿಸಿಕೊಳ್ತಾರೆ. ಸಿನಿಮಾ ಆಯ್ಕೆಯಲ್ಲೂ ಸಹ ವಿಭಿನ್ನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ತಾ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಆದ್ರೆ ಅವ್ರ ತಾಯಿ ಮಾತ್ರ ಇನ್ನು ಹಳ್ಳಿಯಲ್ಲೇ ಬದುಕು ಸಾಗಿಸುತ್ತಿದ್ದಾರೆ.

    MORE
    GALLERIES

  • 28

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ಸೋಶಿಯಲ್ ಮೀಡಿಯಾದಲ್ಲಿ ತಾಯಿ ಬಗೆಗಿನ ಪ್ರೀತಿಯನ್ನು ನಟಿ ಕಂಗನಾ ಹಂಚಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಸಖತ್ ಬೋಲ್ಡ್ ನಟಿ ಅಂದ್ರೆ ಥಟ್ ಅಂತ ನೆನಪಾಗೋದೆ ನಟಿ ಕಂಗಾನಾ, ಇದೀಗ ಕಂಗನಾ ರಣಾವತ್ ತನ್ನ ದಿಟ್ಟ ವ್ಯಕ್ತಿತ್ವದ ರೋಲ್ ಮಾಡೆಲ್ ಯಾರು ಅನ್ನೋದನ್ನು ವಿವರಿಸಿದ್ದಾರೆ.

    MORE
    GALLERIES

  • 38

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ನಟಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ತಾಯಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಯನ್ನು ತನ್ನ ರೋಲ್ ಮಾಡೆಲ್ ಎಂದು ಕಂಗನಾ ಕರೆದಿದ್ದಾರೆ. ಮಗಳು ಸ್ಟಾರ್ ನಟಿಯಾದ್ರೂ ತಾಯಿ ಆಶಾ ಹಳ್ಳಿಯಲ್ಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ.

    MORE
    GALLERIES

  • 48

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ತನ್ನ ತಾಯಿಯ ಫೋಟೋ ಹಂಚಿಕೊಂಡ ನಟಿ ಕಂಗನಾ, ನನ್ನ ಅಮ್ಮ ದಿನಕ್ಕೆ 8 ಗಂಟೆ ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಕಂಗನಾ ಹೇಳಿದ್ದಾರೆ. ತನ್ನ ತಾಯಿ ಒಂದು ಕಾಲದಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ರು ಎಂದೂ ಕಂಗನಾ ಹೇಳಿದ್ದಾರೆ.

    MORE
    GALLERIES

  • 58

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ಫೋಟೋವನ್ನು ಹಂಚಿಕೊಂಡ ನಟಿ, 'ಇಂದಿಗೂ ನನ್ನ ತಾಯಿ ದಿನಕ್ಕೆ 7-8 ಗಂಟೆಗಳ ಕಾಲ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಜನರು ಕೂಡ ನನ್ನ ತಾಯಿಯ ಬಗ್ಗೆ ತಪ್ಪಾಗಿ ಭಾವಿಸಿದ್ದು ಉಂಟು ಎಂದು ನಟಿ ಕಂಗನಾ ಹೇಳಿಕೊಂಡಿದ್ದಾರೆ.

    MORE
    GALLERIES

  • 68

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ಮನೆಗೆ ಬಂದ ಅನೇಕರು ಆಕೆಯ ಬಳಿ ಕಂಗನಾ ತಾಯಿ ಎಲ್ಲಿ ಎಂದು ಕೇಳುತ್ತಾರೆ. ಇದಾದ ಮೇಲೆ ಗದ್ದೆಯಲ್ಲಿ ಕೆಲಸ ನಿಲ್ಲಿಸಿ ಕೈ ತೊಳೆದುಕೊಂಡು ಅವರಿಗೆ ಒಂದು ಕಪ್ ಚಹಾ ನೀಡಿ ನಾನು ಅವಳ ತಾಯಿ ಎಂದು ಹೇಳುತ್ತಾರೆ ನನ್ನ ಅಮ್ಮ.

    MORE
    GALLERIES

  • 78

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ಇನ್ನು ನನ್ನ ತಾಯಿ ಹಳ್ಳಿಯಲ್ಲೇ ಇದ್ದಾರೆ. ಆಕೆ ಎಂದಿಗೂ ಹೊರಗೆ ತಿನ್ನಲು ಇಷ್ಟಪಡುವುದಿಲ್ಲ. ಮನೆಯಲ್ಲಿ ಮಾಡುವ ಆಡುಗೆಯೇ ಆಕೆಗೆ ಇಷ್ಟ, ಅದನ್ನೇ ತಿಂದು ಸಂತೋಷವಾಗಿರುತ್ತಾಳೆ. ಜೊತೆಗೆ ಆಕೆಗೆ ಮುಂಬೈನಲ್ಲಿ ವಾಸಿಸಲು ಇಷ್ಟವಿಲ್ಲ. ವಿದೇಶಕ್ಕೆ ಹೋಗುವಂತ ವಿಚಾರವಂತೂ ಮೊದಲೇ ಇಷ್ಟವಾಗೋದಿಲ್ಲ ಎಂದು ಕಂಗನಾ ಬರೆದುಕೊಂಡಿದ್ದಾರೆ.

    MORE
    GALLERIES

  • 88

    Kangana Ranaut: ಮಗಳು 'ಬಾಲಿವುಡ್ ಕ್ವೀನ್' ಆದ್ರೂ ಜಮೀನಿನಲ್ಲಿ ಕೆಲಸ ಮಾಡುವ ತಾಯಿ! ನಟಿ ಕಂಗನಾ ಅಮ್ಮನ ಫೋಟೋ ವೈರಲ್

    ಹಳ್ಳಿ ಬಿಟ್ಟು ಮುಂಬೈಗೆ ಬರುವಂತೆ ಒತ್ತಾಯ ಮಾಡಿದ್ರೆ ನಮಗೆ ಬೈಯುತ್ತಾಳೆ ಎಂದು ಕಂಗನಾ ಬರೆದುಕೊಂಡಿದ್ದಾರೆ. ಮಗಳು ಎಷ್ಟೇ ಎತ್ತರಕ್ಕೆ ಬೆಳದ್ರು ತಾಯಿ ಆಶಾ ಮಾತ್ರ ಸಿಂಪಲ್ ಆಗಿ ಹಳ್ಳಿ ಜೀವನ ಸಾಗಿಸುತ್ತಿರೋದು ನಿಜಕ್ಕೂ ಅನೇಕರಿಗೆ ಮಾದರಿಯಾಗಿದೆ.

    MORE
    GALLERIES