ಇತ್ತೀಚೆಗೆ ಬಾಲಿವುಡ್‌ನಲ್ಲಿ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಹಾಲಿವುಡ್‌ಗೆ ಏಕೆ ಹೋದ್ರು ಅನ್ನೋ ಪ್ರಶ್ನೆಗೆ ನಟಿ ಪ್ರಿಯಾಂಕಾ ಚೋಪ್ರಾ ಉತ್ತರಿಸಿದ್ದಾರೆ. ಮಾಜಿ ವಿಶ್ವ ಸುಂದರಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಾನು ಬಾಲಿವುಡ್‌ನಲ್ಲಿ ಮೂಲೆಗೆ ತಳ್ಳಲ್ಪಟ್ಟಿದೆ ಅಂತ ಹೇಳಿದ್ದಾರೆ. ಬಾಲಿವುಡ್ ನಲ್ಲಿರುವ ರಾಜಕೀಯದಿಂದ ಬೇಸತ್ತಿದ್ದೆ ಎಂದು ಹೇಳಿದರು.
ಪ್ರಿಯಾಂಕಾ ಅವರ ಈ ಹೇಳಿಕೆಗೆ ನಟಿ ಕಂಗನಾ ಅವರು ತಕ್ಷಣವೇ ಪ್ರತಿಕ್ರಿಯಿಸಿ ಇನ್ನೊಂದು ದೊಡ್ಡ ಮಾತನ್ನು ಬಿಚ್ಚಿಟ್ಟಿದ್ದಾರೆ ಅಂತ ಹೇಳಬಹುದು. ಕಂಗನಾ ಅವರು ಪ್ರಿಯಾಂಕಾ ಅವರ ಮಾತಿಗೆ ಪ್ರತಿಕ್ರಿಯಿಸಿ ನಿರ್ಮಾಪಕ ಕರಣ್ ಜೋಹರ್ ಪ್ರಿಯಾಂಕಾ ಅವರನ್ನು ಬಾಲಿವುಡ್ ನಲ್ಲಿ ಬ್ಯಾನ್ ಮಾಡಿದ್ದರು ಎಂದು ಹೇಳಿದರು. ಪ್ರಿಯಾಂಕಾ ಮತ್ತು ಕಂಗನಾ 2008 ರಲ್ಲಿ ತೆರೆಕಂಡ ‘ಫ್ಯಾಷನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಮತ್ತೊಂದು ಟ್ವೀಟ್‌ನಲ್ಲಿ ಎಸ್‌ಆರ್‌ಕೆ ಅವರೊಂದಿಗಿನ ಸ್ನೇಹದಿಂದಾಗಿ ಕರಣ್ ಜೋಹರ್ ಅವರೊಂದಿಗೆ ಜಗಳ ಆಗಿತ್ತು. ಅವರು ಯಾವಾಗಲೂ ಹೊರಗಿನ ಹೊಸ ಮುಖಗಳನ್ನು ಹುಡುಕುತ್ತಾರೆ. ಪ್ರಿಯಾಂಕಾ ಅವರಿಗೆ ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ತರಹ ಕಾಣಿಸಿದರು. ಅವರಿಗೆ ಕಿರುಕುಳ ನೀಡಲು ಶುರು ಮಾಡಿದರು. ಇದನ್ನು ತಾಳದೆ ಆಕೆ ಭಾರತ ಬಿಟ್ಟು ಹಾಲಿವುಡ್‌ಗೆ ಹಾರಿದಳು ಎಂದು ಬರೆದಿದ್ದಾರೆ. ಚಲನಚಿತ್ರೋದ್ಯಮದ ಸಂಸ್ಕೃತಿ ಮತ್ತು ಪರಿಸರವನ್ನು ಹಾಳುಮಾಡಿದ್ದು ಕರಣ್ ಎಂದು ಕಂಗನಾ ದೂರಿದ್ದಾರೆ.