ಟ್ವಿಟರ್ನಲ್ಲಿ ಸಕ್ರಿಯವಾಗಿದ್ದಾಗ Kangana Ranaut ವಿರುದ್ಧ ದಿನಕ್ಕೆ 200 ಎಫ್ಐಆರ್ ದಾಖಲಾಗುತ್ತಿದ್ದವಂತೆ..!
ಕಂಗನಾ ರನೌತ್ (Kangana Ranaut) ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದು ಗೊಳಿಸಿರುವ ವಿಷಯ ಗೊತ್ತೇ ಇದೆ. ನಟಿ ಕಂಗನಾ ಅವರು ಈ ಹಿಂದೆ ಟ್ವಿಟರ್ನಲ್ಲಿದ್ದಾಗ (Twitter) ಒಂದಲ್ಲಾ ಒಂದು ವಿಷಯದಿಂದಾಗಿ ಟ್ರೆಂಡಿಂಗ್ ಹಾಗೂ ಚರ್ಚೆಯ ವಿಷಯವಾಗಿರುತ್ತಿದ್ದರು. ಈಗಲೂ ಸಹ ಕಂಗನಾ ಟ್ವಿಟರ್ನಲ್ಲಿ ಸಕ್ರಿಯವಾಗಿದ್ದಾಗಿನ ಪರಿಸ್ಥಿತಿ ಕುರಿತಾಗಿ ಹೇಳಿ ಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕಂಗನಾ ರನೌತ್ ಇನ್ಸ್ಟಾಗ್ರಾಂ ಖಾತೆ)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿ ಕಳೆದ ಶುಕ್ರವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಸಹ ಪಡೆದುಕೊಳ್ಳುತ್ತಿದೆ.
2/ 7
ಸಿನಿಮಾದ ಜೊತೆಗೆ ಕಂಗನಾ ರನೌತ್ ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಸಿನಿಮಾದ ಪ್ರಚಾರ ಕೆಲಸದಲ್ಲಿ ತೊಡಗಿದ್ದ ಕಂಗನಾ ಅವರು ಕೆಲ ದಿನಗಳ ಹಿಂದೆ ಕಿರುತೆರೆಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
3/ 7
ಕಂಗನಾ ರನೌತೋ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ದ ಕಪಿಲ್ ಶರ್ಮಾ ಶೋನಲ್ಲಿ ತಮ್ಮ ಸಿನಿಮಾ ತಲೈವಿ ಪ್ರಮೋಷನ್ಗಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ನಿರೂಪಕ ಕಪಿಲ್ ಶರ್ಮಾ ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಮಜವಾಗಿ ಉತ್ತರಿಸಿದ್ದಾರೆ.
4/ 7
ನಿರೂಪಕನ ಜೊತೆ ಮಾತನಾಡುತ್ತಾ ಕಂಗನಾ ಈ ಸಲ ಸಾಕಷ್ಟು ಪ್ರಶ್ನೆಗಳಿಗೆ ವಿವಾದಾತ್ಮಕ ಉತ್ತರಗಳನ್ನು ನೀಡುವವುರಿಂದ ತುಂಬಾ ನಯವಾಗಿ ನುಣುಚಿಕೊಂಡಿದ್ದಾರೆ. ಅಂತೆಯೇ ಸಾಮಾಜಿಕ ಜಾಲತಾಣದ ಕುರಿತಾಗಿಯೂ ಮಾತನಾಡಿದ್ದಾರೆ.
5/ 7
ಟ್ವಿಟರ್ ಬ್ಯಾನ್ ಕುರಿತಾಗಿ ಮಾತನಾಡಿದ ಕಂಗನಾ ರನೌತ್, ತಾನು ಟ್ವಿಟರ್ನಲ್ಲಿ ಸಕ್ರಿಯವಾಗಿರುವಾಗ ದಿನಕ್ಕೆ ತನ್ನ ವಿರುದ್ಧ 200 ಎಫ್ಐಆರ್ ದಾಖಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ತಮಗೆ ಯಾವ ರೀತಿಯ ಹುಡುಗ ಬೇಕೆಂದೂ ಮನಚಿಚ್ಚಿ ಮಾತನಾಡಿದ್ದಾರೆ.
6/ 7
ತಾನು ಹೆಚ್ಚಾಗಿ ಮಾತನಾಡುವ ಸ್ವಭಾವದವಳಾಗಿದ್ದು, ಕಡಿಮೆ ಮಾತನಾಡುವ ಹುಡುಗ ತನಗಿಷ್ಟ ಎಂದಿರುವ ನಟಿ, ತಾನು ಜಿಮ್ಗಿಂತ ಹೆಚ್ಚಾಗಿ ಯೋಗ ಮಾಡುವ ಹುಡಗ ಇಷ್ಟ ಎಂದಿದ್ದಾರೆ.
7/ 7
ಕಂಗನಾ ರನೌತ್ ಅವರು ಕಾಂಟ್ರವರ್ಸಿಗಳ ಬಗ್ಗೆ ಕಪಿಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂಗನಾ, ತುಂಬಾ ಹುಷಾರಾಗಿ ಮತ್ತೆ ವಿವಾದಕ್ಕೀಡಾಗದ ಹಾಗೆ ಉತ್ತರ ಕೊಟ್ಟಿದ್ದಾರೆ.