Kangana Ranaut: ಎಮರ್ಜೆನ್ಸಿ ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್!
ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಎಮರ್ಜೆನ್ಸಿ, ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಅನೇಕರು ಕಾತುರದಿಂದ ಕಾಯ್ತಿದ್ದಾರೆ. ಇದೀಗ ನಟಿ ಎಮರ್ಜೆನ್ಸಿ ಸಿನಿಮಾ ಬಗ್ಗೆ ಮಾತಾಡಿದ್ದು, ಈ ಸಿನಿಮಾ ಎಷ್ಟು ಮುಖ್ಯ ಎಂದು ಹೇಳಿದ್ದಾರೆ.
ನಟಿ ಕಂಗನಾ ರಣಾವತ್, ಸಿನಿಮಾ ಮಾತ್ರವಲ್ಲದೇ ಅನೇಕ ವಿಚಾರಗಳಲ್ಲೂ ಸುದ್ದಿಯಾಗ್ತಾನೆ ಇರ್ತಾರೆ. ಇದೀಗ ನಟಿ ಎಮರ್ಜೆನ್ಸಿ ಸಿನಿಮಾ ಮಾಡುತ್ತಿದ್ದಾರೆ.
2/ 8
ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಕುರಿತ ಈ ಸಿನಿಮಾದಲ್ಲಿ ನಟಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ.
3/ 8
ಎಮರ್ಜೆನ್ಸಿ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತ ಕಂಗನಾ ರಣಾವತ್, ಚಿತ್ರದ ಶೂಟಿಂಗ್ ಪೂರ್ಣಗೊಳಿಸಲು ಕಂಗನಾ ರಣಾವತ್ ಅವರು ತಮ್ಮ ಆಸ್ತಿ ಅಡವಿಟ್ಟಿರೋದಾಗಿ ಹೇಳಿದ್ದಾರೆ.
4/ 8
ಕಂಗನಾ ರಣಾವತ್ ಧಾಕಡ್ ಸಿನಿಮಾ ಸೋಲಿನ ಬಳಿಕ ನಟಿ ಎಮರ್ಜೆನ್ಸಿ ಸಿನಿಮಾದಲ್ಲಿ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ನಿರ್ಮಾಣ ಮಾಡುವಲ್ಲಿ ಅವರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಇರುವ ಆಸ್ತಿಯನ್ನೆಲ್ಲಾ ಅಡಿವಿಟ್ಟು, ತಂದ ಸಾಲದಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.
5/ 8
ಎಮರ್ಜೆನ್ಸಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈ ಬಗ್ಗೆ ನಟಿ ಕಂಗನಾ ರಣಾವತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
6/ 8
ಶೂಟಿಂಗ್ ವೇಳೆ ಡೆಂಗ್ಯೂ ಬಂದಿದ್ದರಿಂದ ತುಂಬಾ ಕಷ್ಟ ಆಗಿತ್ತು. ಎಷ್ಟೇ ಅಡೆತಡೆಗಳು ಬಂದರೂ ಕೂಡ ಅದನ್ನೆಲ್ಲಾ ಧೈರ್ಯವಾಗಿ ನಟಿ ಕಂಗನಾ ಶೂಟಿಂಗ್ ಮುಗಿಸಿದ್ದಾರೆ.
7/ 8
ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಎಮರ್ಜೆನ್ಸಿ ಸಿನಿಮಾ ತಯಾರಾಗುತ್ತಿದೆ. ಕೆಲವು ತಿಂಗಳ ‘ಎಮರ್ಜೆನ್ಸಿ’ ಚಿತ್ರಕ್ಕೆ ಶೂಟಿಂಗ್ ಮುಗಿದಿದ್ದು, ಕೆಲವು ಮೇಕಿಂಗ್ ಸ್ಟಿಲ್ಗಳನ್ನು ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ.
8/ 8
ಶ್ರೇಯಸ್ ತಲ್ಪಡೆ, ಅನುಪಮ್ ಖೇರ್, ಮಿಲಿಂದ್ ಸೋಮನ್, ಸತೀಶ್ ಕೌಶಿಕ್, ಮಹಿಮಾ ಚೌಧರಿ ಮುಂತಾದವರು ನಟಿಸಿದ್ದಾರೆ. 1975ರ ಕಾಲಘಟದ ನೈಜ ಘಟನೆಗಳನ್ನು ಆಧರಿಸಿ ಎಮರ್ಜೆನ್ಸಿ ಚಿತ್ರ ಮೂಡಿಬರುತ್ತಿದೆ.