Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

ನವದೆಹಲಿ: ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First published:

  • 17

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಾಫಿಯಾಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ. ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಮಿಟ್ಟಿ ಮೇ ಮಿಲಾ ದೂಂಗಾ (ಮಣ್ಣಿನೊಳಗೆ ಮಣ್ಣು ಮಾಡುತ್ತೇನೆ) ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡಿಂಗ್ ಆಗುತ್ತಿದೆ.

    MORE
    GALLERIES

  • 27

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಅವರ ಮಗ ಅಸದ್ ಮತ್ತು ಆತನ ಸಹಚರನನ್ನು ಪೊಲೀಸ್ ಎನ್‌ಕೌಂಟರ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಆದಿತ್ಯನಾಥ್ ಅವರನ್ನು ಕಂಗನಾ ಹಾಡಿ ಹೊಗಳಿದ್ದಾರೆ.

    MORE
    GALLERIES

  • 37

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    ಈ ಸಂಬಂಧ ಫೆಬ್ರವರಿ 25ರಂದು ಮುಖ್ಯಮಂತ್ರಿ ಯೋಗಿ ನೀಡಿದ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಅವರು,’ನನ್ನ ಅಣ್ಣ ಯೋಗಿ ಆದಿತ್ಯನಾಥ್ ಅವರನ್ನು ನಾನು ಇಷ್ಟಪಡುವಷ್ಟು ಬೇರೆ ಯಾರು ಇಷ್ಟಪಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 47

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    2005ರಲ್ಲಿ ಬಿಎಸ್‌ಪಿ ಶಾಸಕರೊಬ್ಬರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ, ಸಮಾಜವಾದಿ ಪಕ್ಷವು ಮಾಫಿಯಾಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದರು.

    MORE
    GALLERIES

  • 57

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    ಅಲ್ಲದೇ ಇದೇ ವೇಳೆ ಆದಿತ್ಯನಾಥ್ ಅವರು, ಈ ಎಲ್ಲ ದುಷ್ಟರನ್ನು ನಾನು ನಾಶ ಮಾಡುತ್ತೇನೆ ಎಂದು ವಿಧಾನಸಭೆಯಲ್ಲಿ ಘಂಟಾಘೋಷವಾಗಿ ಅಬ್ಬರಿಸಿ ಭಾಷಣ ಮಾಡಿದ್ದರು.

    MORE
    GALLERIES

  • 67

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    ಮಾಫಿಯಾದಲ್ಲಿ ಹೆಚ್ಚು ಹೆಸರು ಕೇಳಿ ಬರುತ್ತಿರುವುದು ಸಮಾಜವಾದಿ ಪಕ್ಷದ ಸಂಸದರದ್ದು. ಇದು ದುಷ್ಟರನ್ನು ಬೆಳೆಸುತ್ತಿದೆ, ಖಂಡಿತವಾಗಿ ನಾನು ಅವರ ಬೆನ್ನು ಮುರಿಯುವ ಕೆಲಸ ಮಾಡುತ್ತೇನೆ ಎಂದು ಆದಿತ್ಯನಾಥ್‌ ವಿಧಾನ ಸಭೆಯಲ್ಲಿ ಹೇಳಿದ್ದರು.

    MORE
    GALLERIES

  • 77

    Kangana Ranaut: ಯೋಗಿ ಆದಿತ್ಯನಾಥ್‌ರನ್ನು ನನ್ನಷ್ಟು ಬೇರಾರೂ ಇಷ್ಟ ಪಡಲಾರರು; ಕಂಗನಾ ರಣಾವತ್‌

    ಕಂಗನಾ ಶೇರ್ ಮಾಡಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಅವರ ಭಾಷಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    MORE
    GALLERIES