Kangana Ranaut: ಬಾಲಿವುಡ್ ನಟಿ ಕಂಗನಾ ತೊಟ್ಟ ಈ ಸೀರೆ ಬೆಲೆ ಎಷ್ಟು? ನೀವು ಕೂಡ ಖರೀದಿಸಬಹುದು!
ಬಾಲಿವುಡ್ನ ಕ್ವೀನ್ ಆಗಿ 2 ಬಾರಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವ ಕಂಗನಾ ರನೌತ್, ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಂಗನಾ ಸೀರೆ ಹಾಕಿಕೊಂಡು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.
ಬಾಲಿವುಡ್ನಲ್ಲಿ ಸಾಕಷ್ಟು ನಾಯಕಿಯರಿದ್ದರೂ. ಬಾಲಿವುಡ್ನ ಕ್ವೀನ್ ಆಗಿ ಎರಡು ಬಾರಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವ ಕಂಗನಾ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಝಾನ್ಸಿ ಬಳಿಕ ಮಣಿಕರ್ಣಿಕಾ ಸಿನಿಮಾದಲ್ಲಿ ಲಕ್ಷ್ಮೀ ಬಾಯಿಯಾಗಿ ಜನಪ್ರಿಯತೆ ಗಳಿಸಿದ್ದಾರೆ.
2/ 8
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಅಂದಿನ ನಾಯಕಿ ಜಯಲಲಿತಾ ಅವರ ಜೀವನ ಕಥೆಯಾಧಾರಿತ ತಲೈವಿ ಸಿನಿಮಾದಲ್ಲಿ ಕಂಗನಾ ನಟಿಸಿದ್ದು ಗೊತ್ತೇ ಇದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ನಿರ್ಮಿಸಲಾಗಿದೆ.
3/ 8
ಇತ್ತೀಚೆಗೆ ಕಂಗನಾ ರಣಾವತ್ ಅಭಿನಯದ ಧಕಡ್ ಚಿತ್ರ ಬಿಡುಗಡೆಯಾಯಿತು ಆದರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೋತಿದೆ. ಇದರೊಂದಿಗೆ ಕಂಗನಾ ಈಗ ತಮ್ಮ ಮುಂದಿನ ಚಿತ್ರಗಳತ್ತ ಗಂಭೀರವಾಗಿ ಗಮನಹರಿಸಿದ್ದಾರೆ.
4/ 8
ಕಂಗನಾ ಇತ್ತೀಚೆಗಷ್ಟೇ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಕೇವಲ ರೂ.600 ಸೀರೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಸೀರೆಯ ಫೋಟೋವನ್ನು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
5/ 8
ಕಂಗನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸೀರೆಯಲ್ಲಿ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಸೀರೆಯನ್ನು ಕೋಲ್ಕತ್ತಾದಿಂದ ಕೇವಲ 600 ರೂಪಾಯಿಗೆ ಖರೀದಿಸಿರುವುದಾಗಿ ಕಂಗನಾ ಹೇಳಿದ್ದಾರೆ.
6/ 8
ಈ ಸೀರೆ ಈ ಫೋಟೋ ಇದೀಗ ವೈರಲ್ ಆಗಿದೆ. ಸ್ಥಳೀಯ ಬ್ರಾಂಡ್ಗಳನ್ನು ಆಯ್ಕೆ ಮಾಡಲು ಜನರನ್ನು ಉತ್ತೇಜಿಸುವ ಉದ್ದೇಶದಿಂದ ಕಂಗನಾ ಈ ಪೋಸ್ಟ್ ಮಾಡಿದ್ದಾರೆ.
7/ 8
ಸದ್ಯ ಕಂಗನಾ ತೇಜಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. 'ಯೂರಿ' ಸರ್ಜಿಕಲ್ ಸ್ಟ್ರೈಕ್ ಮತ್ತು ಇತರ ಕೆಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ 'ತೇಜಸ್' ಯುದ್ಧ ವಿಮಾನಗಳನ್ನು ಪೈಲಟ್ ಮಾಡಿದ ವೀರ ಮಹಿಳೆಯ ಜೀವನ ಕಥೆಯನ್ನು ಈ ಚಿತ್ರ ಆಧರಿಸಿದೆ.
8/ 8
ವೀರ ವಾಯುಸೇನೆಯ ಪೈಲಟ್ನ ಕಥೆಯ ಮೇಲೆ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಕಂಗನಾ ಹೇಳಿದ್ದಾರೆ.