Kanagana Ranaut: ಮನಾಲಿಯಲ್ಲಿದೆ ಕಂಗನಾ ಬ್ಯೂಟಿಫುಲ್ ಹೌಸ್; ಹಿಮದಿಂದ ಕೂಡಿದ ಮನೆ ಫೋಟೋ ಹಂಚಿಕೊಂಡ ನಟಿ
ಬಾಲಿವುಡ್ ನಟಿಯರು ಮುಂಬೈನಲ್ಲಿ ಮಾತ್ರವಲ್ಲ, ಅನೇಕ ಕಡೆಯಲ್ಲಿ ಮನೆಗಳನ್ನು ಹೊಂದಿದ್ದಾರೆ. ತಮ್ಮ ರಜೆ ದಿನದಲ್ಲಿ ಪ್ರವಾಸಿತಾಣಗಳಲ್ಲಿ ಕಾಲ ಕಳೆಯಲು ಪ್ರಕೃತಿ ನಡುವೆ ಮನೆ ಮಾಡಿರುತ್ತಾರೆ. ನಟಿ ಕಂಗನಾ ಮನೆಯ ಫೋಟೋಸ್ ಇಲ್ಲಿದೆ.
ನಟಿ ಕಂಗನಾ ರಣಾವತ್ ಸದ್ಯ ಎಮರ್ಜೆನ್ಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಮನಾಲಿಯಲ್ಲಿರುವ ಮನೆಯ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2/ 8
ಬಾಲಿವುಡ್ ನಟಿ ಕಂಗನಾ ರಣಾವತ್ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮನಾಲಿಯಲ್ಲಿರುವ ತಮ್ಮ ಮನೆಯನ್ನು ನೆನಪು ಮಾಡಿಕೊಂಡಿದ್ದಾರೆ.
3/ 8
ಕಂಗನಾ ಶೇರ್ ಮಾಡಿರುವ ಫೋಟೋಗಳಲ್ಲಿ ನಟಿ ಮನೆ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ಮನಾಲಿ ಅದ್ಬುತ ಪ್ರವಾಸಿತಾಣವಾಗಿದೆ.
4/ 8
ಕಂಗನಾ ರಣಾವತ್ 2019ರಲ್ಲಿ ಮನಾಲಿಯಲ್ಲಿರುವ ಮನೆಯನ್ನು ನವೀಕರಿಸಿದ್ರು. ಕಂಗನಾ ರಣಾವತ್ ಮನಾಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರಂತೆ.
5/ 8
ಕಂಗನಾ ರಣಾವತ್, ಮನಾಲಿಯಲ್ಲಿರುವ ತಮ್ಮ ಮನೆಯನ್ನು ಹೆಚ್ಚಾಗಿ ನೆನಪು ಮಾಡಿಕೊಳ್ತಾರಂತೆ. ಜೊತೆಗೆ ತನ್ನ ತಾಯಿಯ ಎಳ್ಳು ಮತ್ತು ಅರಿಶಿನ ಲಡ್ಡುಗಳು ನೆನಪಾಗ್ತುದೆ ಎಂದು ಕಂಗನಾ ಬರೆದುಕೊಂಡಿದ್ದಾರೆ.
6/ 8
ಹಿಮದ ಮಳೆಯಾಗುವ ಸೀಸನ್ ನಲ್ಲಿ ನಟಿ ಕಂಗನಾ ರಣಾವತ್ ಮನೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ.
7/ 8
ನಟಿ ಕಂಗನಾ ಮನೆಯ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಮನಾಲಿಯಲ್ಲಿರುವ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳೋದಾಗಿ ಹೇಳಿದ್ದಾರೆ.
8/ 8
ಸದ್ಯ ಕಂಗನಾ ರಣಾವತ್ ಮುಂಬರುವ ಎಮರ್ಜೆನ್ಸಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಕಂಗಾನ ಸಿನಿಮಾಗಾಗಿ ಕಾಯ್ತಿದ್ದಾರೆ.