Kangana Ranaut: ಒಂದೂವರೆ ವರ್ಷದ ಬಳಿಕ ಮತ್ತೆ ಟ್ವಿಟರ್ಗೆ ಮರಳಿದ ಕಂಗನಾ! ಖಾತೆಯಲ್ಲೇ ಖುಷಿ ಹಂಚಿಕೊಂಡ ನಟಿ
ಒಂದೂವರೆ ವರ್ಷಗಳ ಹಿಂದೆ ಟ್ವಿಟರ್ನಿಂದ ಸಸ್ಪೆಂಡ್ ಆಗಿದ್ದ ನಟಿ ಕಂಗನಾ ರಣಾವತ್ ಮತ್ತೆ ಟ್ಟಿಟರ್ಗೆ ಮರಳಿದ್ದು, ಸಖತ್ ಆ್ಯಕ್ಟೀವ್ ಆಗಿದ್ದಾರೆ. ಟ್ವಿಟರ್ನಲ್ಲಿ ಈ ಬಗ್ಗೆ ನಟಿ ಕಂಗನಾ ಖುಷಿ ಹಂಚಿಕೊಂಡಿದ್ದಾರೆ.
ಸಿನಿಮಾಗಳಿಗಿಂತ ಸದಾ ವಿವಾದಗಳಿಂದಲೇ ನಟಿ ಕಂಗಾನಾ ಸುದ್ದಿಯಾಗುತ್ತಾರೆ. 2021 ರಲ್ಲಿ, ರಾಜಕೀಯ ವಿಚಾರಕ್ಕೆ ನಟಿ ಕಂಗನಾ ಮಾಡಿದ್ದ ಟ್ವೀಟ್ಗಾಗಿ ಆಕೆಯ ಖಾತೆಯನ್ನು ಸಸ್ಪೆಂಡ್ ಮಾಡಲಾಗಿತ್ತು.
2/ 8
ಇದೀಗ ಮತ್ತೆ ಟ್ವಿಟರ್ ಖಾತೆ ಆ್ಯಕ್ಟೀವ್ ಆಗಿದ್ದು ನಟಿ ಪುನಃ ಟ್ವಿಟರ್ಗೆ ಮರಳಿದ ಖುಷಿಯಲ್ಲಿದ್ದಾರೆ. ಈ ಕುರಿತು ಕಂಗನಾ ರಣಾವತ್ ಸಂತಸ ಹಂಚಿಕೊಂಡಿದ್ದಾರೆ.
3/ 8
ಟ್ವಿಟರ್ಗೆ ಮತ್ತೆ ಮರಳಿ ಬಂದಿದ್ದಕ್ಕೆ ಖುಷಿ ಆಗುತ್ತಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಕಮೆಂಟ್ ಗಳ ಮೂಲಕ ನೆಚ್ಚಿನ ನಟಿಗೆ ಸ್ವಾಗತ ಕೋರುತ್ತಿದ್ದಾರೆ.
4/ 8
ಟ್ವಿಟರ್ಗೆ ಮರಳುತ್ತಿದ್ದಂತೆ ನಟಿ ಕಂಗನಾ ರಣಾವತ್ ತಮ್ಮ ಮುಂಬರುವ ಸಿನಿಮಾ ಎಮರ್ಜೆನ್ಸಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಅವರು ಹೇಳಿದ್ದಾರೆ.
5/ 8
ನಟಿಯ ಟ್ವಿಟರ್ ಖಾತೆ ಮರಳಿ ಸಿಕ್ಕಿದ್ದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
6/ 8
ಕಂಗನಾ ರಣಾವತ್ ಅವರನ್ನು ಟ್ವಿಟರ್ನಲ್ಲಿ ಬರೋಬ್ಬರಿ 29 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಇದೀಗ ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
7/ 8
ಎಮರ್ಜೆನ್ಸಿ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತ ನಟಿ ಕಂಗನಾ ರಣಾವತ್, ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದು, ಉಳಿದ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
8/ 8
ಎಮರ್ಜೆನ್ಸಿ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ಮಾಡುತ್ತಿದ್ದಾರೆ. ನಟಿ ತನ್ನ ಆಸ್ತಿಯನ್ನೆಲ್ಲಾ ಅಡವಿಟ್ಟು ಎಮರ್ಜೆನ್ಸಿ ಸಿನಿಮಾ ಮಾಡಿರೋದಾಗಿ ಸಿನಿಮಾ ಚಿತ್ರೀಕರಣದ ಕೊನೆ ದಿನ ಹೇಳಿಕೊಂಡಿದ್ದಾರೆ.