The Incarnation Sita: ಕರೀನಾ ಕೈ ತಪ್ಪಿದ ಸೀತೆ ಪಾತ್ರದಲ್ಲಿ ನಟಿ ಕಂಗನಾ; ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಚಿತ್ರ
THE INCARNATION - SITA: ತಲೈವಿ ಯಶಸ್ಸಿನ ಖುಷಿಯಲ್ಲಿರುವಾಗಲೇ ನಟಿ ಕಂಗನಾ ರನೌತ್ (Kangana Ranaut)ಮತ್ತೊಂದು ಚಿತ್ರದ ಘೋಷಣೆಯನ್ನು ಮಾಡಿದ್ದಾರೆ. ದಿ ಇನ್ಕಾರ್ನೇಷನ್ ಸೀತಾ ಚಿತ್ರದಲ್ಲಿ ಸೀತಾ ಮಾತೆ ಪಾತ್ರ ಅಭಿನಯಿಸಲು ಅವರು ಸಜ್ಜಾಗಿದ್ದು, ತಮ್ಮ ಹೊಸ ಸಿನಿಮಾ ಕುರಿತು ಇನ್ಸ್ಟಾಗ್ರಾಂನಲ್ಲಿ ಅಧಿಕೃತ ಪಡಿಸಿದ್ದಾರೆ.
ಮಣಿಕರ್ಣಿಕಾ- ದಿ ಕ್ಷೀನ್ ಆಫ್ ಝಾನ್ಸಿ, ತಲೈವಿ ಅಂತ ವಿಶೇಷ ಪಾತ್ರಗಳಲ್ಲಿ ಮಿಂಚಿರುವ ನಟಿ ಕಂಗನಾ ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.
2/ 7
ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಅಲೌಕಿಕ್ ದೇಸಾಯಿ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ.
3/ 7
ವಿಶೇಷ ಎಂದರೆ ಈ ಚಿತ್ರದ ಕಥೆಯನ್ನು ಕೆ.ವಿ ವಿಜಯೇಂದ್ರ ಪ್ರಸಾದ್ ಬರೆತ್ತಿದ್ದಾರೆ. ಈಗಾಗಲೇ ಬಾಹುಬಲಿ, ಮಗಧೀರದಂತಹ ಹಿಟ್ ಚಿತ್ರ ನೀಡಿರುವ ಅವರ ಬತ್ತಳಿಕೆಯಲ್ಲಿ ಈಗ ಸೀತೆ ಹೊರ ಬರುತ್ತಿದ್ದಾಳೆ.
4/ 7
ಈ ಹಿಂದೆ ಸೀತೆ ಪಾತ್ರಕ್ಕೆ ನಟಿ ಕರೀನಾ ಕಪೂರ್ ಹೆಸರು ಕೇಳಿ ಬಂದಿತ್ತು. ಆದರೆ, ಕರೀನಾ ಸೀತೆ ಪಾತ್ರ ನಿರ್ವಹಣತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಕರೀನಾ ದುಬಾರಿ ಸಂಭಾವನೆ ಕೇಳಿದ್ದರು.
5/ 7
ಬಳಿಕ ಕೆವಿ ವಿಜಯೇಂದ್ರ ಅವರೇ ಸೀತೆಯ ಪಾತ್ರಕ್ಕೆ ನಟಿ ಕಂಗನಾ ಅವರನ್ನು ಆಯ್ಕೆ ಮಾಡಿದ್ದರು. ಈ ಸಂಬಂಧ ಚಿತ್ರತಂಡದೊಂದಿಗೆ ನಟಿ ಕಂಗನಾ ಜೊತೆ ಮಾತನಾಡಿತ್ತು.
6/ 7
ಸದ್ಯ ಕರೀನಾ ಕಪೂರ್ ಕೈ ತಪ್ಪಿದ ಪಾತ್ರ ನಟಿ ಕಂಗನಾ ಪಾಲಾಗಿದೆ. ಚಿತ್ರ ತಂಡ ಕೂಡ ನಟಿ ಕಂಗನಾರನ್ನು ಸೀತೆ ಪಾತ್ರಕ್ಕೆ ಅಂತಿಮಗೊಳಿಸಿದ್ದು, ಅವರ ಪಾತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಮೂಡಿದೆ.
7/ 7
ದಕ್ಷಿಣ ಭಾರತದ ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ನಟಿ ಕಂಗನಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.