Kangana Ranaut-Deepika Padukone: ಕೇಸರಿ ಮೇಲೆ ಬೂಟುಗಾಲು! ದೀಪಿಕಾ ನಂತ್ರ ಕಂಗನಾಗೂ ಸಂಕಷ್ಟ
ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಿವಾದ ನಂತರ ಈಗ ನಟಿ ಕಂಗನಾ ರಣಾವತ್ ಅವರಿಗೂ ಇದೇ ಭೀತಿ ಶುರುವಾಗಿದೆ. ನಟಿಯ ಲಾಕಪ್ ಶೋ ಪ್ರಮೋಷನ್ ಭಾಗವಾಗಿ ನಟಿ ಕೇಸರಿ ಮೇಲೆ ಬೂಟುಗಾಲಿಟ್ಟಿರುವ ಫೋಟೋ ಈಗ ವೈರಲ್ ಆಗಿದೆ.
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಸಿನಿಮಾದ ಬೇಷರಂ ರಂಗ್ ಸಿನಿಮಾ ಕೇಸರಿ ವಿವಾದವನ್ನು ಎದುರಿಸುತ್ತಿದೆ. ಈಗ ನಟಿ ಕಂಗನಾ ರಣಾವತ್ಗೂ ಅದೇ ಭೀತಿ ಶುರುವಾಗಿದೆ.
2/ 7
ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿ ವಿಪರೀತ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ನಟಿಯ ಈ ಅವತಾರ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಭಾರೀ ವಿರೋಧ ಎದುರಿಸುತ್ತಿದೆ.
3/ 7
ಇದೀಗ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರ ವಿಚಾರದಲ್ಲಿಯೂ ಇದೇ ಆ್ಯಂಗಲ್ನಲ್ಲಿ ಚರ್ಚೆ ಶುರುವಾಗಿದೆ. ನಟಿಯ ರಿಯಾಲಿಟಿ ಶೋ ಲಾಕಪ್ ಇದಕ್ಕೆ ಕಾರಣ.
4/ 7
ಕಂಗನಾ ಅವರು ನಡೆಸಿಕೊಡುವ ಲಾಕಪ್ ಎನ್ನುವ ರಿಯಾಲಿಟಿ ಶೋ ಪ್ರೋಮೋದಲ್ಲಿ ಅವರು ಕೇಸರಿ ಮೇಲೆ ಬೂಟುಕಾಲಿಟ್ಟಿರುವ ಫೊಟೋ ಒಂದು ವೈರಲ್ ಆಗಿದೆ.
5/ 7
ಇದೀಗ ನಟಿ ಕೇಸರಿ ಬಟ್ಟೆಯ ಮೇಲೆ ಬೂಟುಕಾಲನ್ನು ಇಟ್ಟು ದರ್ಪದಲ್ಲಿ ಪೋಸ್ ಕೊಟ್ಟಿದ್ದಾರೆ. ಆದರೆ ಕಂಗನಾ ಟ್ರೋಲ್ ಆಗಿಲ್ಲ. ಇದೇ ವಿಚಾರ ಇಟ್ಟು ನೆಟ್ಟಿಗರು ಕಂಗನಾ ಅವ್ರನ್ನು ಯಾಕೆ ಟ್ರೋಲ್ ಮಾಡುತ್ತಿಲ್ಲ ಎಂದು ಕಾಲೆಳೆಯುತ್ತಿದ್ದಾರೆ.
6/ 7
ದೀಪಿಕಾ ಪಡುಕೋಣೆ ಅವರ ನಂತರ ಈಗ ಬಾಲಿವುಡ್ ಕ್ವೀನ್ ಕಂಗನಾ ಟ್ರೋಲ್ ಆಗುತ್ತಿದ್ದು ವಿವಾದದ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
7/ 7
ಕಂಗನಾ ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಅವರ ರಿಯಾಲಿಟಿ ಶೋ ಕೂಡಾ ನಡೆಸಿಕೊಂಡು ಹೋಗುತ್ತಿದ್ದಾರೆ. ಅದರ ಮಧ್ಯೆ ರಾಜಕೀಯಕ್ಕೂ ಎಂಟ್ರಿ ಕೊಡುವ ಬಗ್ಗೆ ಚರ್ಚೆಯಾಗುತ್ತಿದೆ.