Kangana Ranaut: ಭರತನಾಟ್ಯ ಕಲಿಕೆಯಲ್ಲಿ ಕಂಗನಾ ರಣಾವತ್ ಬ್ಯುಸಿ! ಇದ್ಯಾಕೆ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ನೆಟ್ಟಿಗರು!
Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾ ಅಷ್ಟೇ ಅಲ್ಲ ತಮ್ಮ ವೈಯಕ್ತಿಕ ಫೋಟೋಗಳನ್ನು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಾರೆ. ಭರತನಾಟ್ಯ ಕಲಿಯುತ್ತಿರು ಕಂಗಾನ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಕಂಗನಾ ಬಹುನಿರೀಕ್ಷಿತ ಚಿತ್ರ ಎಮರ್ಜೆನ್ಸಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಕಂಗನಾ ಅಭಿಮಾನಿಗಳು ತೆರೆ ಮೇಲೆ ಎಮರ್ಜೆನ್ಸಿ ಸಿನಿಮಾ ನೋಡಲು ಕಾಯ್ತಿದ್ದಾರೆ. ಚಿತ್ರೀಕರಣದ ವೇಳೆ ನಟಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.
2/ 8
ಭರತನಾಟ್ಯ ಕಲೆ ಅಂದ್ರೆ ಕಂಗಾನಾಗೆ ಅಚ್ಚುಮೆಚ್ಚು, ನೃತ್ಯ ಮಾಡಲು ನಟಿ ಪಿಂಕ್ ಡ್ರೆಸ್ ಧರಿಸಿದ್ದು, ಬಹಳ ಸುಂದರವಾಗಿ ಕಾಣ್ತಿದ್ದಾರೆ. ಕಾಲಿಗೆ ಗೆಜ್ಜೆ ಕಟ್ಟಿ ನೃತ್ಯ ಮಾಡಿದ್ದಾರೆ.
3/ 8
ಕಂಗನಾ ರಣಾವತ್ ಬ್ಯೂಟಿಫುಲ್ ಆಗಿ ಸ್ಮೈಲ್ ಮಾಡುತ್ತಾ ನೃತ್ಯ ಅಭ್ಯಾಸ ಮಾಡಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
4/ 8
ತನ್ನ ಡ್ಯಾನ್ಸ್ ಫೋಟೋಗಳನ್ನು ಶೇರ್ ಮಾಡಿದ ನಟಿ ಕಂಗನಾ ರಣಾವತ್ "ಆಜ್ ತಡ್ಕೆ, ಗುರೂಜಿ ರಾಜೇಂದ್ರ ಚತುರ್ವೇದಿ ಮತ್ತು ಸೀಮಾ ಪುರೋಹಿತ್ ಅವರೊಂದಿಗೆ ಎಂದು ಬರೆದುಕೊಂಡಿದ್ದಾರೆ.
5/ 8
ನೃತ್ಯ ಮಾಡುವಾಗ ಕಂಗನಾ ರಣಾವತ್ ಅನೇಕ ಬಾರಿ ತನ್ನ ಸ್ಟೆಪ್ಸ್ ಗಳನ್ನು ಮರೆತ್ತಿದ್ದಾರೆ. ಈ ಬಗ್ಗೆ ಕೂಡ ಬರೆದುಕೊಂಡಿದ್ದಾರೆ, ನಿಮಗೇನು ಗೊತ್ತು.. ಒಮ್ಮೆ ಏನಾದರೂ ತಪ್ಪಾದಾಗ ಅದು ಸರಿ ಹೋಗಲು ಕೊಂಚ ಸಮಯಬೇಕು." ಎಂದಿದ್ದಾರೆ.
6/ 8
ಪ್ರತಿಯೊಂದು ಪ್ರಯತ್ನವು ಕೌಂಟ್ ಆಗುತ್ತದೆ, ಪ್ರತಿ ಫೇಲ್ಯೂರ್ ಕೂಡ ಯಶಸ್ಸಿನ ಕಡೆಗೆ ದಾರಿ ಮಾಡಿಕೊಡುತ್ತದೆ, ಯಾರನ್ನೂ ಮೂರ್ಖರನ್ನಾಗಿಸುವ ಭಯ ಬೇಡ ಎಂದು ಸಲಹೆ ನೀಡಿದರು. ಕಂಗನಾ ರಣಾವತ್ ಬರೆದಿದ್ದಾರೆ.
7/ 8
ನೆನಪಿನಲ್ಲಿಡಿ, ಗುರುಗಳು ನಿಮ್ಮನ್ನು ತಿದ್ದುವ ವೇಳೆ ಟೀಕಿಸಿದರೆ ಅದನ್ನು ಋಣಾತ್ಮಕವಾಗಿ ತೆಗೆದುಕೊಳ್ಳಬೇಡಿ ಆದರೆ ಸಕಾರಾತ್ಮಕತೆ ಸಹಕರಿಸಿ ಎಂದು ನಟಿ ಕಂಗನಾ ರಣಾವತ್ ಕಿವಿಮಾತು ಹೇಳಿದ್ದಾರೆ.
8/ 8
ಇನ್ನು ಈ ಫೋಟೋಗಳಲ್ಲಿ ನೋಡಿದ್ರೆ ನಟಿ ಕಂಗನಾ ರಣಾವತ್ ತೂಕ ಹೆಚ್ಚಾಗಿದೆ. ಕಂಗನಾ ಅವರ ಬಹುನಿರೀಕ್ಷಿತ ಚಿತ್ರ ಎಮರ್ಜಿನ್ಸಿ ಸಿನಿಮಾಗಾಗಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.