Kangana Ranaut: ಹೊಸ ಕಾರು ಖರೀದಿಸಿದ ಕಂಗನಾ - ಈ ಐಷಾರಾಮಿ ವಾಹನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
Bollywood: ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ಹೊಸ ಕಾರು ಖರೀದಿಸಿದ್ದಾರೆ. ಧಕಡ್ ಸಿನಿಮಾ ರಿಲೀಸ್ ಗೆ ಒಂದು ದಿನ ಮುನ್ನವೇ ಆಕೆ ಕಾರು ಖರೀದಿಸಿರುವುದು ಇದೀಗ ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ. ಇದು ಬಹಳ ಬೆಲೆಬಾಳುವ ಕಾರು ಎನ್ನಲಾಗುತ್ತಿದೆ. ಮರ್ಸಿಡಿಸ್-ಮೇಬ್ಯಾಕ್ S680 ಐಷಾರಾಮಿ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಮಾದರಿಯ ಕಾರನ್ನು ಖರೀದಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕಂಗನಾ ಪಾತ್ರರಾಗಿದ್ದಾರೆ. ಈ ಕಾರಿನ ಬೆಲೆ ಅಕ್ಷರಶಃ ರೂ. 3.5 ಕೋಟಿ.
ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಇತ್ತೀಚಿನ ಚಿತ್ರ ಧಕಡ್ ಶುಕ್ರವಾರ ಬಿಡುಗಡೆಯಾಗಿದೆ. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.
2/ 10
ಅವರು ಈ ಚಿತ್ರದಲ್ಲಿ ಏಜೆಂಟ್ ಅಗ್ನಿ, ಅಂದರೆ ಗೂಢಚಾರಿ ಅಧಿಕಾರಿ ಪಾತ್ರವನ್ನು ನಿರ್ವಹಿಸಿದ್ದಾರೆ.
3/ 10
ಸಿನಿಮಾ ರಿಲೀಸ್ ಮುನ್ನಾ ದಿನವೇ ಕಂಗನಾ ರಣಾವತ್ ಕಾರು ಖರೀದಿಸಿದ್ದಾರೆ.ಇದರೊಂದಿಗೆ ಇದೀಗ ಬಾಲಿವುಡ್ ನಲ್ಲಿ ಈ ಸುದ್ದಿ ಹಾಟ್ ಟಾಪಿಕ್ ಆಗಿದೆ. ಕಂಗನಾ ರಣಾವತ್ ಅವರ ಕಾರು ಖರೀದಿ ಇಡೀ ಬಿಟೌನ್ನಲ್ಲಿ ಸದ್ದು ಮಾಡುತ್ತಿದೆ.
4/ 10
ಇದು ಬಹಳ ಬೆಲೆಬಾಳುವ ಕಾರು ಎಂದು ಹೇಳಲಾಗುತ್ತಿದೆ. ಮರ್ಸಿಡಿಸ್-ಮೇಬ್ಯಾಕ್ S680 ಐಷಾರಾಮಿ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮಾದರಿಯ ಕಾರನ್ನು ಖರೀದಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕಂಗನಾ ಪಾತ್ರರಾಗಿದ್ದಾರೆ ಎನ್ನಲಾಗುತ್ತಿದೆ.
5/ 10
ಈ ಕಾರಿನ ಬೆಲೆ ಅಕ್ಷರಶಃ ರೂ. 3.5 ಕೋಟಿ.. ಸದ್ಯ ಕಂಗನಾ ಖರೀದಿಸಿರುವ ಈ ಕಾರಿನ ವಿಡಿಯೋಗಳು ಹರಿದಾಡುತ್ತಿವೆ.
6/ 10
ಇದಕ್ಕೂ ಮುನ್ನ ಕಂಗನಾ ಬಳಿ ಎರಡು ಕಾರುಗಳಿದ್ದವು. ಆದರೆ, ಆಕೆ ಮತ್ತೊಂದು ಹೊಸ ಕಾರು ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ.
7/ 10
ಕಂಗನಾ ಅವರ ಹೊಸ ಕಾರಿಗೆ ತಾಯಿ ಪೂಜೆ ಮಾಡಿದರು. ಹಿಂದೂ ಸಂಪ್ರದಾಯದ ಪ್ರಕಾರ ಕಾರಿಗೆ ಹಳದಿ ಬಣ್ಣ ಬಳಿದು ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
8/ 10
ಆಕೆ ಪ್ರತಿ ಚಿತ್ರಕ್ಕೆ 8 ಕೋಟಿ ರೂಪಾಯಿಗಳವರೆಗೆ ಸಂಪಾದನೆ ಪಡೆಯುತ್ತಿರುವುದರಿಂದ. ಅವರು ಹೊಸ ಕಾರುಗಳನ್ನು ಖರೀದಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.
9/ 10
ಮತ್ತೊಂದೆಡೆ, ಬಾಲಿವುಡ್ನಲ್ಲಿ ಧಕಡ್ ಹಿಟ್ ಆಗಲಿದೆ ಎಂದು ಪ್ರೇಕ್ಷಕರು ಮತ್ತು ಚಲನಚಿತ್ರ ವಿಶ್ಲೇಷಕರು ಈಗಾಗಲೇ ಹೇಳಿದ್ದು, ಜನರು ಸಹ ಈ ಚಿತ್ರವನ್ನು ಮೆಚ್ಚಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಏಜೆಂಟ್ ಅಗ್ನಿ ಎಂಬ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
10/ 10
ಕಂಗನಾ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ನಟನೆಯಿಂದ ಒಳ್ಳೆಯ ಹಿಟ್ ಚಿತ್ರ ನೀಡಬಹುದು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.