ಆ್ಯಕ್ಷನ್ ಕಟ್ ಹೇಳಿದ ಚೊಚ್ಚಲ ಚಿತ್ರದಲ್ಲೇ ಭರವಸೆ ನವನ್ ಮೂಡಿಸಿದ್ದಾರೆ. ಈ ಹಿಂದೆ ಕಿರುಚಿತ್ರಗಳ ಮೂಲಕ ನಿರ್ದೇಶನದ ಚಾಕಚಕ್ಯತೆ ಅರಿತಿರುವ ನವನ್ ಕಂಬ್ಳಿಹುಳ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರಕ್ಕೆ ಶಿವಪ್ರಸಾದ್ ಸಂಗೀತ ಸಂಯೋಜಿಸಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ರಾಘವೇಂದ್ರ ಟಿ.ಕೆ. ಸಂಕಲನ ಸಿನಿಮಾಕ್ಕಿದೆ. ನವೆಂಬರ್ 4ರಂದು ರಿಲೀಸ್ ಆಗ್ತಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ.