ಸೌತ್ನಲ್ಲಿ ಡಿಫರೆಂಟ್ ಸಿನಿಮಾಗಳನ್ನು ಕೊಡುವ, ಡಿಫರೆಂಟಾಗಿ ಕಥೆ ಹೇಳುವ ನಟ ಕಮಲ್ ಹಾಸನ್ ಅವರು ಕಾಂತಾರ ಸಿನಿಮಾ ನೋಡಿ ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಅಭಿನಂದನೆ ತಿಳಿಸಿದ್ದಾರೆ. ಇದೀಗ ನಟ ಮತ್ತೊಮ್ಮೆ ಕಾಂತಾರ ಸಿನಿಮಾವನ್ನು ಮುಕ್ತವಾಗಿ ಹೊಗಳಿದ್ದಾರೆ. ಕಾಂತಾರ ಸಿನಿಮಾ ಗ್ರೇಟ್ ಎಕ್ಸಾಂಪಲ್ ಎಂದು ಹೇಳಿದ್ದಾರೆ. ಕಾಂತಾರ ಗ್ರೇಟ್ ಎಕ್ಸಾಂಪಲ್. ನಾನು ತುಂಬಾ ಖುಷಿಯಾಗಿದ್ದೇನೆ. ನಾನು ಕೂಡಾ ಕನ್ನಡ ಫಿಲ್ಮ್ ಇಂಡಸ್ಟ್ರಿಯವನು ಎಂದಿದ್ದಾರೆ ಕಮಲ್ ಹಾಸನ್. ಮೋಡಗಳು ಸರಿದಿವೆ, ಕರ್ನಾಟಕದಲ್ಲಿ ಜನರು ವಿಭಿನ್ನವಾಗಿ ಯೋಚಿಸಲಾರಂಭಿಸಿದ್ದಾರೆ ಎಂದು ಕನ್ನಡಿಗರನ್ನೂ ಮುಕ್ತವಾಗಿ ಹೊಗಳಿದ್ದಾರೆ ನಟ ಕಮಲ್ ಹಾಸನ್. ವಂಶವೃಕ್ಷ, ಒಂದಾನೊಂದು ಕಾಲದಲ್ಲಿ ಅಂತಹ ಸಿನಿಮಾಗಳನ್ನು ಕೊಟ್ಟ ನೆಲದಿಂದ ಮತ್ತೊಂದು ದೊಡ್ಡ ಸಿನಿಮಾ ಬಂದಿದೆ ಎಂದಿದ್ದಾರೆ ಎಂದು ಕನ್ನಡ ಚಿತ್ರರಂಗವನ್ನು ಹೊಗಳಿದ್ದಾರೆ. ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ನಟ ಇಂಡಿಯನ್ 2 ಸಿನಿಮ ಮಾಡುತ್ತಿದ್ದು ಇದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಕಮಲ್ ಹಾಸನ್ ಪ್ರತಿಬಾರಿ ಸಿನಿಮಾ ಮಾಡುವಾಗಲೇ ತುಂಬಾ ವಿಭಿನ್ನವಾದ ಕಾನ್ಸೆಪ್ಟ್ ಹಿಡಿದು ಸಿನಿಮಾ ಮಾಡುವುದನ್ನು ಕಾಣಬಹುದು. ಅವರ ಬಹಳಷ್ಟು ಹೇಳಿಕೆ ವಿವಾದವಾಗಿದ್ದೂ ಇದೆ.