Yuva Rajkumar: ಯುವ ರಾಜ್ಕುಮಾರ್ ಮೊದಲ ಸಿನಿಮಾಗೆ ಮಲಯಾಳಿ ಬೆಡಗಿ ಹೀರೋಯಿನ್
ಹೃದಯಂ ಸಿನಿಮಾ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶನ್ ಅವರು ಆರಂಭಿಕ ಸಿನಿಮಾಗಳಲ್ಲಿಯೇ ಕ್ರೇಜ್ ಸೃಷ್ಟಿಸಿದ ಮಾಲಯಾಳಿ ಚೆಲುವೆ. ಇದೀಗ ಯುವ ಮೊದಲ ಚಿತ್ರಕ್ಕೆ ಮಾಲಿವುಡ್ ಬೆಡಗಿ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಮಲಯಾಳಂ ಚೆಲುವೆ ಕಲ್ಯಾಣಿ ಪ್ರಿಯದರ್ಶಿನಿ ಹೃದಯಂ ಸಿನಿಮಾ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಈ ಮಲ್ಲು ಗರ್ಲ್ ಈಗ ಕನ್ನಡಕ್ಕೂ ಬರ್ತಿದ್ದಾರೆ.
2/ 10
ಮೋಹನ್ಲಾಲ್ ಮಗನಿಗೆ ಜೋಡಿಯಾಗಿ ಹೃದಯಂ ಸಿನಿಮಾದಲ್ಲಿ ನಟಿಸಿದ್ದ ಕಲ್ಯಾಣಿ ಪ್ರಿಯದರ್ಶನ್ ಸಿಂಪಲ್ ಆಗಿರುವ ಕೇರಳದ ಚೆಲುವೆ. ಈಗ ಕನ್ನಡ ಚಿತ್ರದಲ್ಲಿ ಮಿಂಚಲಿದ್ದಾರೆ.
3/ 10
ರಾಜ್ಕುಮಾರ್ ಕುಟುಂಬದ ಕುಡಿ ಯುವ ರಾಜ್ಕುಮಾರ್ ಅವರ ಸಿನಿಮಾಗೆ ಈ ನಟಿ ಹೀರೋಯಿನ್ ಆಗಲಿದ್ದಾರೆ ಎನ್ನುವ ಸುದ್ದಿಯೊಂದು ಓಡಾಡುತ್ತಿದೆ.
4/ 10
ಈಗಾಗಲೇ ಸಿನಿಮಾ ಹಾಗೂ ಪ್ರಸಿದ್ಧ ಬ್ರ್ಯಾಂಡ್ ಜಾಹೀರಾತುಗಳಲ್ಲಿ ಕಾಣಿಸಕೊಂಡಿರುವ ಕಲ್ಯಾಣಿ ಕನ್ನಡ ಪ್ರೇಕ್ಷರನ್ನು ಕೂಡಾ ರಂಜಿಸಲಿದ್ದಾರೆ ಎನ್ನುವುದು ಗಾಂಧೀನಗರದಲ್ಲಿ ಕೇಳಿ ಬರ್ತಿರೋ ಮಾತು.
5/ 10
ಆದರೆ ಈ ಕುರಿತು ಕಲ್ಯಾಣಿ ಪ್ರಿಯದರ್ಶನ್ ಆಗಲಿ, ಯುವ ರಾಜ್ಕುಮಾರ್ ಆಗಲಿ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.
6/ 10
ಯುವ ರಾಜ್ಕುಮಾರ್ ಸಿನಿಮಾಗೆ ಇವರೇ ನಾಯಕಿ ಅಂತ ಅಧಿಕೃತ ಮಾಹಿತಿಯೋ ಹೊರಬಿದ್ದಿಲ್ಲ. ಆದರೆ ಇವರೇ ಫೈನಲ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
7/ 10
ಕಲ್ಯಾಣಿ ಪ್ರಿಯದರ್ಶನ್ ಪ್ರಧಾನವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.
8/ 10
ತೆಲುಗು ಚಲನಚಿತ್ರ ಹಲೋ (2017) ನಲ್ಲಿ ನಟನೆಯನ್ನು ಪ್ರಾರಂಭಿಸಿದರು. ಅವರ ಅಭಿನಯಕ್ಕಾಗಿ ಅವರು ಅತ್ಯುತ್ತಮ ಡಿಬಟ್ ಹೀರೋಯಿನ್ಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಅತ್ಯುತ್ತಮ ತೆಲುಗು ನಟಿಯ ಚೊಚ್ಚಲ ಚಿತ್ರಕ್ಕಾಗಿ SIIMA ಪ್ರಶಸ್ತಿಯನ್ನು ಗೆದ್ದರು.
9/ 10
ಕಲ್ಯಾಣಿ ಭಾರತೀಯ ಚಲನಚಿತ್ರ ನಿರ್ಮಾಪಕ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ಅವರ ಮಗಳು. ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರು ಇಬ್ಬರು ಮಕ್ಕಳಲ್ಲಿ ಹಿರಿಯವರು, ಇವರಿಗೆ ಸಹೋದರ ಸಿದ್ಧಾರ್ಥ್ ಇದ್ದಾನೆ.
10/ 10
ಕಲ್ಯಾಣಿ ಸದ್ಯ ಮಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಅವರು ಈಗ ಬಹಳಷ್ಟು ಸಿನಿಮಾ ಆಫರ್ ಪಡೆಯುತ್ತಿದ್ದಾರೆ.