ಚಿರಂಜೀವಿ ಪುತ್ರಿ ಶ್ರೀಜಾ ಕಲ್ಯಾಣ್ ದೇವ್ ದಂಪತಿಗೆ ಹೆಣ್ಣು ಮಗು ಕೂಡ ಇದೆ. ಕಳೆದ ಕೆಲವು ವರ್ಷಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರೂ ಕೂಡ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕಲ್ಯಾಣ್ ದೇವ್ ಮತ್ತು ಶ್ರೀಜಾ ಯಾವುದೇ ಪೋಸ್ಟ್ ಮಾಡಿದರೂ ದೊಡ್ಡ ಸುದ್ದಿ ಆಗುತ್ತಿದೆ. ಕಲ್ಯಾಣ್ ದೇವ್ ಶ್ರೀಜಾ ಅವರ ಹಿರಿಯ ಮಗಳ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ. ಈ ಸುದ್ದಿ ಮತ್ತಷ್ಟು ವೈರಲ್ ಆಗಿತ್ತು. (ಫೈಲ್/ಫೋಟೋ)
ಶ್ರೀಜಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಕಲ್ಯಾಣ್ ದೇವ್ ಅವರ ಹೆಸರನ್ನು ತೆಗೆದಿದ್ದಾರೆ. ಬಳಿಕ ಇಬ್ಬರ ವಿಚ್ಛೇದನದ ವದಂತಿಗಳು ಹರಡಿದವು. ಅಲ್ಲದೇ ಕಲ್ಯಾಣ್ ದೇವ್ ವರ್ಷಾನುಗಟ್ಟಲೆ ಮೆಗಾ ಫ್ಯಾಮಿಲಿಯಿಂದ ದೂರವಿದ್ದಾರೆ. ಕಳೆದ ವರ್ಷ ಕಲ್ಯಾಣ್ ದೇವ್ ಅಭಿನಯದ 'ಸೂಪರ್ ಮಚ್ಚಿ' ಚಿತ್ರವನ್ನು ಮೆಗಾ ಹೀರೋಗಳು ಪ್ರಚಾರ ಮಾಡಿರಲಿಲ್ಲ. ಕಲ್ಯಾಣ್ ದೇವ್ ಅವರಿಗೆ ಹೆಚ್ಚು ಸಿನಿಮಾ ಅವಕಾಶಗಳೂ ಕೂಡ ಸಿಗುತ್ತಿಲ್ಲ. ಮೆಗಾ ಹೀರೋಗಳಿಗೆ ಹೆದರುವ ನಿರ್ದೇಶಕ, ನಿರ್ಮಾಪಕರು ಕಲ್ಯಾಣ್ ದೇವ್ನನ್ನು ದೂರವಿಟ್ಟಂತೆ ಕಾಣುತ್ತಿದೆ.
ಕಲ್ಯಾಣ್ ದೇವ್ ತಮ್ಮ ಮಗಳು ನವಿಷ್ಕಾ ಮತ್ತು ನಿವೃತಿಲಾ ಅವರ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿರೋದಾಗಿ ತಮ್ಮ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯದಲ್ಲೇ ಶ್ರೀಜಾ ಜೊತೆಗಿನ ವಿಚ್ಛೇದನದ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ತೆಲುಗು ಮಾಧ್ಯಮ ವರದಿ ಮಾಡಿದೆ. ಮಗಳು ಮತ್ತು ಅಳಿಯನ ನಡುವೆ ರಾಜಿ ಮಾಡಲು ಚಿರು ಪ್ರಯತ್ನಿಸಿದರೂ ಫಲ ಸಿಕ್ಕಿಲ್ಲ ಎನ್ನಲಾಗ್ತಿದೆ. ಮಗಳು ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಾಗತಿಸುತ್ತೇವೆ ಎಂದು ಚಿರಂಜೀವಿ ಹೇಳಿದ್ದಾರಂತೆ. (ಟ್ವಿಟರ್/ಫೋಟೋ)