ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ಮಗಳು ನ್ಯಾಸಾರನ್ನು ದೂರ ಇಡುತ್ತಿದ್ದರು. ಆದರೆ ಈಗ ನಟಿ ಕಾಜೋಲ್ ತಮ್ಮ ಇನ್ಸ್ಟಾಗ್ರಾನಲ್ಲೇ ಮಗಳ ಚಿತ್ರಗಳನ್ನು ಹಂಚಿಕೊಳ್ಳೋಕೆ ಆರಂಭಿಸಿದ್ದಾರೆ. ಮಗಳ ಹೊಸ ಫೋಟೋಶೂಟ್ನ ಚಿತ್ರಗಳನ್ನು ಕಾಜೋಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನ್ಯಾಸಾ ಗಾಗ್ರಾ ಚೋಲಿ ತೊಟ್ಟಿದ್ದು, ಮುದ್ದಾ ದ ನಗುಬೀರುತ್ತಾ ಈ ಪೋಸ್ ಕೊಟ್ಟಿದ್ದಾರೆ. ಮಾಧ್ಯಮಗಳು ಮಗಳು ನ್ಯಾಸಾ ಬಗ್ಗೆ ಕೇಳಿದಾಗಲೂ ಕಾಜೋಲ್ ಹಾಗೂ ಅಜಯ್ ದೇವಗನ್ ಸಾಕಷ್ಟು ಸಲ ಸಿಡಿಮಿಡಿಗೊಂಡಿದ್ದೂ ಇದೆ. ಇದನ್ನೆಲ್ಲ ನೋಡಿದರೆ ದೇವಗನ್ ದಂಪತಿ ಮಗಳ ಬಾಲಿವುಡ್ ಎಂಟ್ರಿಗೆ ವೇದಿಕೆ ಸಿದ್ಧಪಡಿಸುತ್ತಿರುವಂತೆ ಕಾಣುತ್ತಿದೆ. ಆದರೆ ನ್ಯಾಸಾ ಬಾಲಿವುಡ್ ಎಂಟ್ರಿ ಬಗ್ಗೆ ಈ ಹಿಂದೆ ಕಾಜೋಲ್ ಮಾತನಾಡಿದ್ದು, ಅವಳಿಗೆ ಇನ್ನೂ 16 ವರ್ಷ, ವಿದ್ಯಾಭ್ಯಾಸವನ್ನಾದರೂ ಮುಗಿಸಲು ಬಿಡಿ ಎಂದಿದ್ದರು. ಈಗಾಗಲೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವ ದೇವಗನ್ ದಂಪತಿ ಯಶಸ್ವಿಯೂ ಆಗಿದ್ದಾರೆ. ಹೀಗಿರುವಾಗಲೇ ಮಗಳನ್ನು ಸ್ವಂತ ಬ್ಯಾನರ್ನಿಂದಲೇ ಅವರು ಬಾಲಿವುಡ್ಗೆ ಪರಿಚಯಿಸುವ ಸಾಧ್ಯತೆ ಹೆಚ್ಚಾಗಿದೆ ಅನ್ನೋ ಗುಸುಗುಸು ಬಿ-ಟೌನ್ನಲ್ಲಿ ಆರಂಭವಾಗಿದೆ. ಬಹಳ ಸಮಯದ ನಂತರ ಮಗಳೊಂದಿಗೆ ಮುಂಬೈನ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಿದಾಗ ತೆಗೆದ ಸೆಲ್ಫಿ ಇದು. ಬಹಳ ಸಮಯದ ನಂತರ ಮಗಳೊಂದಿಗೆ ಮುಂಬೈನ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಿದಾಗ ತೆಗೆದ ಸೆಲ್ಫಿ ಇದು.