ಟಾಲಿವುಡ್ ಜನಪ್ರಿಯ ನಟಿ ಕಾಜಲ್ ತೇಜಾ ನಿರ್ದೇಶನದ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ಬಳಿಕ ಕೃಷ್ಣವಂಶಿ ನಿರ್ದೇಶನದ ಚಂದಮಾಮ ಚಿತ್ರದ ಮೂಲಕ ಹೆಚ್ಚು ಜನಪ್ರಿಯರಾದರು.
ಕಾಜಲ್ ತನ್ನ ಬಾಲ್ಯದ ಗೆಳೆಯ ಗೌತಮ್ ಕಿಚ್ಲು ಅವರನ್ನು ಮದುವೆಯಾಗಿ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. 1 ವರ್ಷದಿಂದ ನಟನೆ ಬ್ರೇಕ್ ಕೊಟ್ಟಿದ್ದ ನಟಿ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ.
2/ 9
ಕಾಜಲ್ ಸದ್ಯ ಪತಿ ಗೌತಮ್ ಜೊತೆ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ತೈವಾನ್ ನಲ್ಲಿ ಇಯರ್ ಎಂಡ್ ಟ್ರಿಪ್ ಮಾಡ್ತಿರೋ ಜೋಡಿಯ ಕಿಸ್ಸಿಂಗ್ ಫೋಟೋಗಳು ವೈರಲ್ ಆಗಿದೆ.
3/ 9
ಟ್ರಿಪ್ ಮೂಡನಲ್ಲಿ ಪತಿ ಹಾಗೂ ಮಗುವಿನೊಂದಿಗಿನ ಕೆಲ ಫೋಟೋಗಳನ್ನು ಕಾಜಲ್ ಹಂಚಿಕೊಂಡಿದ್ದಾರೆ.
4/ 9
ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ನಟಿ ಕಾಜಲ್ ಸದ್ಯ ಇಂಡಿಯನ್ 2 ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ.
5/ 9
ಚಂದ್ರಮುಖಿ 2 ಚಿತ್ರದಲ್ಲಿ ನಟಿಸಲು ಕಾಜಲ್ಗೆ ಅವಕಾಶ ಸಿಕ್ಕಿದೆಯಂತೆ. ಈ ಸಿನಿಮಾದಲ್ಲಿ ಕಾಜಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಲಿದ್ದಾರೆ. 2005 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಚಂದ್ರಮುಖಿಯ ಅಧಿಕೃತ ಮುಂದುವರಿದ ಭಾಗವಾಗಿ ಈ ಚಿತ್ರ ಬರುತ್ತಿದೆ.
6/ 9
ಇತ್ತೀಚೆಗಷ್ಟೇ ಚಿತ್ರ ತನ್ನ ಮೊದಲ ಶೆಡ್ಯೂಲ್ ಮುಗಿಸಿದೆ. ವಡಿವೇಲು, ರಾಧಿಕಾ ಶರತ್ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ.
7/ 9
ಟಾಲಿವುಡ್ ನಟಿ ಕಾಜಲ್ ಆಸ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದ್ದು, ವೆಬ್ ಸೈಟ್ ಒಂದರ ಪ್ರಕಾರ ಕಾಜಲ್ ಅವರ ಆಸ್ತಿ ಮೌಲ್ಯ ರೂ. 83 ಕೋಟಿ ಇದೆಯಂತೆ. ವಾರ್ಷಿಕ ಆದಾಯ ರೂ. 6 ಕೋಟಿ ಎಂದು ಅಂದಾಜಿಸಲಾಗಿದೆ. ಐಷಾರಾಮಿ ಕಾರುಗಳು ರೂ. 3 ಕೋಟಿ, ಮನೆ ರೂ. 7 ಕೋಟಿ ಬೆಲೆ ಬಾಳಲಿದೆ
8/ 9
ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿದ್ದ ಹಿನ್ನೆಲೆ ಕಳೆದ 1 ವರ್ಷಗಳಿಂದ ನಟನೆಗೆ ಬ್ರೇಕ್ ಕೊಟ್ಟಿದ್ರು. ಕೊನೆಯದಾಗಿ ಆಚಾರ್ಯ ಚಿತ್ರದಲ್ಲಿ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಅವರ ಪಾತ್ರವನ್ನು ಆ ಸಿನಿಮಾದಿಂದ ನಿರ್ದೇಶಕ ಮತ್ತು ನಿರ್ಮಾಪಕರು ತೆಗೆದು ಹಾಕಿದ್ದಾರೆ.
9/ 9
ಇತ್ತೀಚೆಗಷ್ಟೇ ಕಾಜಲ್ ಪಾಂಡಂಟಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕಾಜಲ್, ತಮ್ಮ ಮುದ್ದು ಮಗ ನೀಲ್ ಅವರ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.