Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

Kajal Aggarwal : ಸೌತ್ ನಟಿ ಕಾಜಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ.ಕಾಜಲ್ ತನ್ನ ಬಾಲ್ಯದ ಗೆಳೆಯ ಗೌತಮ್ ಕಿಚ್ಲು ಅವರನ್ನು ಮದುವೆಯಾಗಿದ್ದಾರೆ. ಇತ್ತೀಚೆಗಷ್ಟೇ ಪ್ರೇಮಿಗಳ ದಿನದಂದು ಪತಿ ಜತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ ನಟಿ.

First published:

  • 17

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    ಕಾಜಲ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಪತಿ ಗೌತಮ್ ಕಿಚ್ಲು ಅವರ ಜೊತೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದಲ್ಲದೆ ಅವರು ಯಾವತ್ತೂ ನನ್ನ ವ್ಯಾಲೆಂಟೈನ್ ಎಂದು ಬರೆದಿದ್ದಾರೆ. ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 27

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    ಕಾಜಲ್ ಸದ್ಯ ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಮೂರು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 37

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    ತೆಲುಗಿನಲ್ಲಿ ಬಾಲಯ್ಯ 108ರಲ್ಲಿ ಕಾಜಲ್ ನಟಿಸಲಿದ್ದಾರಂತೆ. ತೆಲಂಗಾಣ ಹಿನ್ನಲೆಯಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ಇಬ್ಬರು ಬಾಲಯ್ಯ ಇರಲಿದ್ದಾರೆ. ಹಿರಿಯ ಬಾಲಯ್ಯ ಎದುರು ಕಾಜಲ್ ನಟಿಸಲಿದ್ದು, ಅವರ ಮಗಳಾಗಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಲೇಟೆಸ್ಟ್ ಟಾಕ್.

    MORE
    GALLERIES

  • 47

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    ನಟಿ ಕೇಳಿದ ಮೊತ್ತ ನೀಡಲು ನಿರ್ಮಾಪಕರು ಸಿದ್ಧರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ನಟಿಸಲು ಕಾಜಲ್ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 57

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    ಈ ಸುದ್ದಿಯಲ್ಲಿ ಎಷ್ಟೊಂದು ಸತ್ಯಾಂಶವಿದೆ ಎನ್ನುವುದನ್ನು ಕಾದು ನೋಡಲೇಬೇಕು. ಅನಿಲ್ ರವಿಪುಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿರುವ ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.

    MORE
    GALLERIES

  • 67

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    ಕಾಜಲ್​ಗೆ ಮತ್ತೊಂದು ಒಳ್ಳೆಯ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ. ಚಂದ್ರಮುಖಿ 2 ಚಿತ್ರದಲ್ಲಿ ನಟಿಗೆ ಅವಕಾಶ ಸಿಕ್ಕಿದೆಯಂತೆ. ಈ ಸಿನಿಮಾದಲ್ಲಿ ಕಾಜಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಲಿದ್ದಾರೆ.

    MORE
    GALLERIES

  • 77

    Kajal Aggarwal: ಪತಿಯ ಜೊತೆ ಸ್ವೀಟ್ ಮೊಮೆಂಟ್! ಲವ್ಲೀ ಫೋಟೋ ಶೇರ್ ಮಾಡಿದ ಕಾಜಲ್

    2005 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಚಂದ್ರಮುಖಿಯ ಸಿನಿಮಾದ ಸೀಕ್ವೆಲ್ ಇದಾಗಿದೆ. ಇತ್ತೀಚೆಗಷ್ಟೇ ಚಿತ್ರ ತನ್ನ ಮೊದಲ ಶೆಡ್ಯೂಲ್ ಮುಗಿಸಿದೆ. ವಡಿವೇಲು, ರಾಧಿಕಾ ಶರತ್‌ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ.

    MORE
    GALLERIES