ಮದುವೆ, ಮಗುವಿನ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಕಾಜಲ್ ಸದ್ಯ 5 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕರುಂಗಪಿಯಂ, ಪ್ಯಾರಿಸ್ ಪ್ಯಾರಿಸ್, ಕ್ವೀನ್ ರಿಮೇಕ್, ಘೋಸ್ಟಿ ಮುಂತಾದ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಉಮಾ ಎಂಬ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯನ್ ಸಿನಿಮಾ ಇಂಡಿಯನ್ 2 ಚಿತ್ರದಲ್ಲೂ ಕಾಣಿಸಿಕೊಳ್ತಿದ್ದಾರೆ.
ಕಾಜಲ್ಗೆ ಮತ್ತೊಂದು ಒಳ್ಳೆಯ ಅವಕಾಶ ಕೂಡ ಸಿಕ್ಕಿದೆ. ಚಂದ್ರಮುಖಿ 2 ಚಿತ್ರದಲ್ಲಿ ನಟಿಸಲು ಆಕೆಗೆ ಅವಕಾಶ ಸಿಕ್ಕಿದೆಯಂತೆ. ಈ ಸಿನಿಮಾದಲ್ಲಿ ಕಾಜಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಲಿದ್ದಾರೆ. 2005 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಚಂದ್ರಮುಖಿಯ ಮುಂದುವರಿದ ಭಾಗವಾಗಿ ಈ ಚಿತ್ರ ಬರುತ್ತಿದೆ. ಫೋಟೋ: Instagram
ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದಲ್ಲಿ ಕಾಜಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶುರುವಾಗಿ ನಂತರ ಚಿತ್ರೀಕರಣ ನಿಂತಿತು. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ರೂಪದಲ್ಲಿ ಸಮಸ್ಯೆಗಳು ಎದುರಾಗಿ ಇನ್ನೂ ಪೂರ್ಣಗೊಂಡಿಲ್ಲ. ಈ ಚಿತ್ರದ ಒಂದು ಭಾಗದ ಚಿತ್ರೀಕರಣದ ನಂತರ.. ಸೆಟ್ನಲ್ಲಿ ಅಪಘಾತ ಸಂಭವಿಸಿದೆ. ಮತ್ತು ನಂತರ ನಟ ವಿವೇಕ್ ಸಾವು, ಇದರೊಂದಿಗೆ ನಿರ್ದೇಶಕ ಶಂಕರ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಡುವೆ ಭಿನ್ನಾಭಿಪ್ರಾಯಗಳಿವೆ. ಫೋಟೋ: Instagram