ಸಿಹಿ ಸುದ್ದಿ ಕೊಟ್ಟ Kajal Aggarwal-Gautam Kitchlu: ಹೊಸ ಅತಿಥಿಯನ್ನು ಬರ ಮಾಡಿಕೊಂಡ ಸ್ಟಾರ್ ದಂಪತಿ..!
ನಟಿ ಕಾಜಲ್ ಅಗರ್ವಾಲ್ ಅವರ ಸಿನಿ ವೃತ್ತಿಗೆ 16 ವರ್ಷವಾಗಿದ್ದು, ಅವರು ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿ ಕಟುಂಬದ ಜೊತೆ ಬಣ್ಣದ ಲೋಕದಲ್ಲೂ ಸಕ್ರಿಯವಾಗಿದ್ದಾರೆ. ಇಂತಹ ನಟಿ ಈಗ ಸಿಹಿ ಸುದ್ದಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಕಾಜಲ್ ಅಗರ್ವಾಲ್ ಇನ್ಸ್ಟಾಗ್ರಾಂ ಖಾತೆ)
ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಸುದ್ದಿ ಕಳೆದ ಕೆಲ ಸಮಯದಿಂದ ಟಾಲಿವುಡ್ನಲ್ಲಿ ಗುಲ್ಲಾಗಿದೆ. ಅಲ್ಲದೆ ಇದೇ ಕಾರಣದಿಂದಾಗಿ ಕಾಜಲ್ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
2/ 7
ಈ ಸುದ್ದಿ ಹರಿದಾಡುತ್ತಿರುವಾಗಲೇ ಕಾಜಲ್ ಅಗರ್ವಾಲ್ ಅವರು ತಮ್ಮ ಕುಟುಂಬಕ್ಕೆ ಆಗಮನವಾಗಿರುವ ಹೊಸ ಅತಿಥಿಯ ಕುರಿತಾಗಿ ನೆಟ್ಟಿಗರ ಜೊತೆ ಖಷಿಯಿಂದ ಹಂಚಿಕೊಂಡಿದ್ದಾರೆ. ಅಷ್ಟು ಯಾರು ಆ ಹೊಸ ಅತಿಥಿ ಅಂತೀರಾ..?
3/ 7
ಅದೇ ಮಿಯಾ.... ಹೌದು, ಕಾಜಲ್ ಹಾಗೂ ಗೌತಮ್ ಕಿಚ್ಲು ಅವರು ಒಂದು ನಾಯಿ ಮರಿಯನ್ನು ಮನೆಗೆ ತಂದಿದ್ದಾರೆ. ಇದು ತಮ್ಮ ಮೊದಲ ಮಗಳು ಎಂದು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
4/ 7
ಗೌತಮ್ ತಮ್ಮ ಮುದ್ದಿನ ಮಗಳ ಜತೆಗಿನ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂತೆಯೇ ಕಾಜಲ್ ಅಗರ್ವಾಲ್ ಸಹ ಅಂತಹದ್ದೇ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.
5/ 7
ಇನ್ನು ಕಾಜಲ್ ಅಗರ್ವಾಲ್ ಅವರಿಗೆ ನಾಯಿ ಎಂದರೆ ಬಾಲ್ಯದಿಂದಲೂ ಭಯವಂತೆ. ಆದರೆ ಪತಿ ಗೌತಮ್ ಅವರು ಸಾಕು ಪ್ರಾಣಿಗಳ ಜೊತೆಯಲ್ಲೇ ಬೆಳೆದವರಂತೆ. ಅದಕ್ಕೆ ಕಾಜಲ್ ಕೊನೆಗೂ ಮನಸ್ಸು ಮಾಡಿ ಈ ಸಲ ಮುದ್ದಾದ ಈ ನಾಯಿ ಮರಿಯನ್ನು ದತ್ತು ಪಡೆಯಲು ಒಪ್ಪಿಗೆ ನೀಡಿದ್ದಾರಂತೆ.
6/ 7
ಮುದ್ದಿನ ಮಿಯಾ ತಮ್ಮ ಮನೆಗೆ ಬಂದಿದೆ. ಮಿಯಾ ಜೊತೆಗಿನ ಈ ಜರ್ನಿ ಯಾವ ರೀತಿ ಇರುತ್ತದೆ ಎಂದು ನೋಡಲು ಕಾತರಳಾಗಿದ್ದೇನೆ ಅಂತ ಕಾಜಲ್ ಬರೆದುಕೊಂಡಿದ್ದಾರೆ.
7/ 7
ಗೌತಮ್ ಸಹ ಮಿಯಾ ಬಂದ ಖುಷಿಯಲ್ಲಿ ಒಂದು ಪೋಸ್ಟ್ ಮಾಡಿದ್ದು, ಕೊನೆಗೂ ನಾಯಿ ಮರಿ ತಲು ಕಾಜಲ್ ಅವರನ್ನು ಒಪ್ಪಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಅಭಿನಯದ ಸಿನಿಮಾ ಆಚಾರ್ಯ ರಿಲೀಸ್ಗೆ ಸಿದ್ಧತೆ ನಡೆಸಿದೆ.