R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

ಕಬ್ಜ ಚಿತ್ರದ ರಿಲೀಸ್ ದಿನದ ಬಗ್ಗೆನೂ ಒಂದು ಕುತೂಹಲ ಇದ್ದೇ ಇದೆ. ಪುನೀತ್ ರಾಜ್‌ಕುಮಾರ್ ಅವರಿಗೂ ಕಬ್ಜ ಸಿನಿಮಾಕ್ಕೂ ಏನು ಸಂಬಂಧ? ಮಾರ್ಚ್‌-17 ರಂದು ಅಪ್ಪು ಜನ್ಮ ದಿನ ಇದೆ. ಇದೇ ದಿನವೇ ಸಿನಿಮಾ ಯಾಕೆ ರಿಲೀಸ್ ಆಗುತ್ತಿದೆ? ಈ ಒಂದು ಪ್ರಶ್ನೆಗೆ ಕಬ್ಜ ಡೈರೆಕ್ಟರ್ ಆರ್.ಚಂದ್ರು ಉತ್ತರ ಕೊಟ್ಟಿದ್ದಾರೆ.

First published:

 • 18

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಕ್ರೇಜ್ ದಿನೇ ದಿನೇ ಹೆಚ್ಚುತಲೇ ಇದೆ. ಚಿತ್ರದ ಪ್ರತಿಯೊಂದು ವಿಷಯವೂ ಒಂದೊಂದಾಗಿಯೇ ರಿವೀಲ್ ಆಗುತ್ತಿವೆ. ಟಿಕೆಟ್‌ ಬುಕಿಂಗ್ ಒಂದುವಾರದ ಮೊದಲೇ ಆರಂಭಗೊಂದಿದೆ. ಟಿಕಟ್ ಬುಕಿಂಗ್‌ಲ್ಲೂ ಕಬ್ಜ ಸಿನಿಮಾ ಭಾರೀ ಕ್ರೇಜ್ ಹುಟ್ಟುಹಾಕಿದೆ.

  MORE
  GALLERIES

 • 28

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ತನ್ನದೇ ರೀತಿಯಲ್ಲಿ ಹೊಸ ಅಲೆಯನ್ನ ಎಬ್ಬಿಸಿದೆ. ಚಿತ್ರದಲ್ಲಿ ರವಿ ಬಸ್ರೂರು ಸಂಗೀತ ಮೋಡಿ ಮಾಡಿದೆ. ಟ್ರೈಲರ್ ಅಂತೂ ಚಿತ್ರದ ಬಗೆಗಿನ ನಿರೀಕ್ಷೆಯನ್ನ ಮತ್ತಷ್ಟು ಜಾಸ್ತಿ ಮಾಡಿದೆ.

  MORE
  GALLERIES

 • 38

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಕಬ್ಜ ಚಿತ್ರದ ರಿಲೀಸ್ ದಿನದ ಬಗ್ಗೆನೂ ಒಂದು ಕುತೂಹಲ ಇದ್ದೇ ಇದೆ. ಪುನೀತ್ ರಾಜ್‌ಕುಮಾರ್ ಅವರಿಗೂ ಕಬ್ಜ ಸಿನಿಮಾಕ್ಕೂ ಏನು ಸಂಬಂಧ? ಮಾರ್ಚ್‌-17 ರಂದು ಅಪ್ಪು ಜನ್ಮ ದಿನ ಇದೆ. ಇದೇ ದಿನವೇ ಸಿನಿಮಾ ಯಾಕೆ ರಿಲೀಸ್ ಆಗುತ್ತಿದೆ? ಈ ಒಂದು ಪ್ರಶ್ನೆಗೆ ಕಬ್ಜ ಡೈರೆಕ್ಟರ್ ಆರ್.ಚಂದ್ರು ಉತ್ತರ ಕೊಟ್ಟಿದ್ದಾರೆ.

  MORE
  GALLERIES

 • 48

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಕಬ್ಜ ಡೈರೆಕ್ಟರ್ ಆರ್‌. ಚಂದ್ರು ತಮ್ಮ ಕಬ್ಜ ಚಿತ್ರದ ಬಗ್ಗೆ ಅಪ್ಪು ಅವರಿಗೆ ಹೇಳ್ತಾನೇ ಇದ್ದರು. ಪವರ್ ಸ್ಟಾರ್ ಪುನೀತ್ ಸದಾ ಚಂದ್ರು ಅವರ ಕೆಲಸಕ್ಕೆ ಶುಭ ಹಾರೈಸುತ್ತಿದ್ದರು. ದೊಡ್ಡ ಸಿನಿಮಾ ಮಾಡ್ತಾಯಿದ್ದಿರಿ, ನಿಮಗೆ ಒಳ್ಳೆಯದಾಗಲಿ ಅಂತಲೂ ಚಂದ್ರುಗೆ ಅಪ್ಪು ಹೇಳಿದ್ದರು.

  MORE
  GALLERIES

 • 58

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಈ ಚಿತ್ರದ ಬಗ್ಗೆ ತುಂಬಾನೇ ಕುತೂಹಲ ಇಟ್ಟುಕೊಂಡಿದ್ದರು. ಕೆಲಸದ ಎಲ್ಲ ವಿಷಯವನ್ನೂ ಸದಾ ಕೇಳುತ್ತಿದ್ದರು. ಅಂತಹ ಅಪ್ಪು ನಮ್ಮೊಂದಿಗಿಲ್ಲ. ಅವರ ನೆನಪಿಗಾಗಿ ಅವರ ಅಭಿಮಾನಿಯಾಗಿ ನಾನು ಈ ಚಿತ್ರವನ್ನ ಅವರ ಜನ್ಮ ದಿನದಂದು ರಿಲೀಸ್ ಮಾಡ್ತಾ ಇದ್ದೇನೆ ಎಂದು ಆರ್ ಚಂದ್ರು, ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.

  MORE
  GALLERIES

 • 68

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಪವರ್ ಸ್ಟಾರ್ ಪುನೀತ್ ಕನ್ನಡ ನಾಡಿನ ಜನರ ದೇವರಾಗಿದ್ದಾರೆ. ಅಭಿಮಾನಿ ದೇವರುಗಳ ಈ ದೈವದ ಹಬ್ಬದಂದು ಕಬ್ಜ ಚಿತ್ರ ರಿಲೀಸ್ ಆಗುತ್ತಿದೆ ಅನ್ನುವ ಖುಷಿನೂ ನನಗೆ ಇದೆ ಎಂದು ಕಬ್ಜ ಡೈರೆಕ್ಟರ್ ಆರ್. ಚಂದ್ರು ಹೇಳಿಕೊಂಡಿದ್ದರು.

  MORE
  GALLERIES

 • 78

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಕಬ್ಜ ಸಿನಿಮಾ ಮಾರ್ಚ್‌-17 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಇದೇ ವೇಳೆನೆ ಆರ್. ಚಂದ್ರು ತಮ್ಮ ಸೋಷಿಯಲ್ ಮೀಡಿಯಾ ಪೇಜಸ್ ನಲ್ಲಿ ಅಪ್ಪು ಜೊತೆಗಿನ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಅಪ್ಪು ಜನ್ಮ ದಿನದಂದು ಚಿತ್ರ ರಿಲೀಸ್ ಮಾಡ್ತಿರೋ ಕಾರಣವೇನು ಅನ್ನೋದನ್ನು ಕೂಡ ಇದೇ ಫೋಟೊ ಜೊತೆಗೆ ಬರೆದುಕೊಂಡಿದ್ದಾರೆ.

  MORE
  GALLERIES

 • 88

  R Chandru: ಪವರ್ ಸ್ಟಾರ್ ಪುನೀತ್ ಜನ್ಮದಿನಕ್ಕೆ ಕಬ್ಜ ಚಿತ್ರ ಬರ್ತಿರೋದ್ಯಾಕೆ? ಆ ಹಳೆ ಫೋಟೋ ಚಂದ್ರು ಶೇರ್ ಮಾಡಿದ್ದೇಕೆ?

  ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಕ್ರೇಜ್ ದೊಡ್ಡ ಮಟ್ಟದಲ್ಲಿಯೇ ಇದೆ. ಸಿನಿಮಾ ಗೆಲ್ಲುವ ನಿರೀಕ್ಷೆನೂ ಅತಿ ಹೆಚ್ಚಾಗಿದೆ. ಕಾಂತಾರ ಬಳಿಕ ಕಬ್ಜ ತನ್ನದೇ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಉಳಿದಂತೆ ಸಿನಿಮಾ ಹೇಗಿದೆ ಅನ್ನುವ ಕುತೂಹಲ ಜೋರಾಗಿದೆ.

  MORE
  GALLERIES