Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

ನಟ ಉಪೇಂದ್ರ ಬಹುನಿರೀಕ್ಷಿತ ಸಿನಿಮಾ ಕಬ್ಜ ಸಾಂಗ್ ರಿಲೀಸ್ ಇವೆಂಟ್ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಅದ್ಧೂರಿಯಾಗಿ ನಡೆಯಿತು. ಕಬ್ಜ ಸಿನಿಮಾದ 3ನೇ ಸಾಂಗ್ ಅನ್ನು ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

First published:

  • 18

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ಕಬ್ಜ ಸಾಂಗ್ ರಿಲೀಸ್ ಇವೆಂಟ್ಗೆ ಅನೇಕ ಗಣ್ಯರು ಆಗಮಿಸಿದ್ದರು. ನಟ ಶಿವಣ್ಣ, ನಟಿ ಗೀತಾ ಶಿವರಾಜ್ ಕುಮಾರ್ ಹಾಗೂ ಸಚಿವ ಸುಧಾಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಣ್ಣ ಹಾಗೂ ಉಪೇಂದ್ರ ವೇದಿಕೆ ಮೇಲೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    MORE
    GALLERIES

  • 28

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ವೇದಿಕೆ ಮೇಲೆ ಶಿವಣ್ಣ ಹಾಗೂ ಉಪೇಂದ್ರ ತಮಾಷೆ ಮಾಡಿ ನೆರೆದಿದ್ದ ಜನರನ್ನೆಲ್ಲಾ ನಗಿಸಿದ್ದಾರೆ. ಓಂ ಸಿನಿಮಾ ಡೈಲಾಗ್ ಹೇಳಿದ ಶಿವಣ್ಣ, ಸಖತ್ ಡ್ಯಾನ್ಸ್ ಮಾಡಿ ಜನರನ್ನು ರಂಜಿಸಿದ್ದಾರೆ.

    MORE
    GALLERIES

  • 38

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ಕಬ್ಜ ಸ್ಪೆಷನ್ ಹಾಡಿನಲ್ಲಿ ಉಪ್ಪಿ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಿದ್ದಾರೆ. ರವಿ ಬಸ್ರೂರ್ ಸಂಗೀತದ ಪ್ರಮೋದ್ ಮರವಂತೆ ಸಾಹಿತ್ಯದ ಚುಮು ಚುಮು ಚಳಿ ಸಾಂಗ್, ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.

    MORE
    GALLERIES

  • 48

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ಕಬ್ಜ ಸಾಂಗ್ ಲಾಂಚ್ ಇವೆಂಟ್ ಕಾರ್ಯಕ್ರಮದಲ್ಲಿ ಮಾತಾಡಿದ ಶಿವರಾಜ್ ಕುಮಾರ್, ಶಿಡ್ಲಘಟ್ಟ ನನಗೆ ತುಂಬಾ ಪರಿಚಿತ, ಅರ್.ಚಂದ್ರು ನಮ್ಮ ಮನೆ ಹುಡುಗ ಅಂದ್ರೆ ತಪ್ಪಲ್ಲ ಎಂದ್ರು. ಉಪೇಂದ್ರ ಅಂದು ಓಂ ಚಿತ್ರ ಮಾಡಿರ್ಲಿಲ್ಲ ಅಂದ್ರೆ ಭಾರತೀಯ ಚಿತ್ರರಂಗದಲ್ಲಿ ಅಂಡರ್ ವರ್ಲ್ಡ್ ಸಿನಿಮಾ ಬರ್ತಿರ್ಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.

    MORE
    GALLERIES

  • 58

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ಶ್ರಿಯಾ ಸರಣ್ ಶೀಘ್ರದಲ್ಲೇ ಕಬ್ಜಾ ಮೂಲಕ ಪ್ರೇಕ್ಷಕರಿಗೆ ಉತ್ತಮ ಕಿಕ್ ನೀಡಲು ಸಿದ್ಧರಾಗಿದ್ದಾರೆ. ಟಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಶ್ರಿಯಾ ಸರಣ್ ಅದ್ಭುತ ನಟಿ ಮಾತ್ರವಲ್ಲ.. ಫ್ಯಾಶನ್ ಕ್ವೀನ್  ಆಗಿದ್ದು, ಉಪ್ಪಿಗೆ ನಾಯಕಿಯಾಗಿ ತೆರೆ ಮೇಲೆ ಮಿಂಚಲಿದ್ದಾರೆ.

    MORE
    GALLERIES

  • 68

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ಕಬ್ಜ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತಾಡಿದ ಉಪೇಂದ್ರ, ಶಿವರಾಜ್ ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಶಿವಣ್ಣನಿಗೆ ಮತ್ತೆ ಒಂದು ಸಿನಿಮಾ ಮಾಡೇ ಮಾಡ್ತೀನಿ ಎಂದು ಉಪೇಂದ್ರ ಅನೌನ್ಸ್ ಮಾಡಿದ್ದಾರೆ.

    MORE
    GALLERIES

  • 78

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ನಿರ್ಮಾಪಕರು ಗೀತಕ್ಕ ಕೂಡ ಇಲ್ಲೆ ಇದ್ದಾರೆ. ಗೀತಕ್ಕ ಕೂಡ ನಮ್ಮ ನಿರ್ಮಾಣ ಸಂಸ್ಥೆಯಲ್ಲೇ ಸಿನಿಮಾ ಮಾಡಿ ಅಂತ ಹೇಳಿದ್ದಾರೆ. ಮತ್ತೆ ಶಿವಣ್ಣಿನಿಗೆ ಶೀಘ್ರವೇ ಆ್ಯಕ್ಷನ್ ಕಟ್ ಹೇಳೋದಾಗಿ ಉಪೇಂದ್ರ ಹೇಳಿದ್ದಾರೆ.

    MORE
    GALLERIES

  • 88

    Kabzaa Movie: ಕಬ್ಜ ಸಿನಿಮಾ ಆಡಿಯೋ ರಿಲೀಸ್​; ವೇದಿಕೆ ಮೇಲೆ ಶಿವಣ್ಣ, ಉಪೇಂದ್ರ ಸಖತ್​ ಡ್ಯಾನ್ಸ್​

    ಶಿವಣ್ಣನ ಸಿನಿಮಾ ಬಗ್ಗೆ ಮಾತಾಡುತ್ತಾ ಉಪೇಂದ್ರ ಪುನೀತ್ ರಾಜ್ ಕುಮಾರ್ ನೆನಪು ಮಾಡಿಕೊಂಡಿದ್ದಾರೆ. ಪುನೀತ್ ಜೊತೆ ಸಿನಿಮಾ ಮಾಡುವ ಆಸೆ ತನ್ನಗಿತ್ತು ಎನ್ನುವ ವಿಷಯವನ್ನು ನಟ ಉಪೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

    MORE
    GALLERIES