ಹಾಡು ಕೇಳುವ ಅಭ್ಯಾಸ ನಿಮಗಿದೆಯಾ? ಬಿಡುವಿದ್ದಾಗ, ಅಥವಾ ಪ್ರಯಾಣ ಬೆಳಸುವಾಗ ಹಾಡುಗಳನ್ನು ಕೇಳಬೇಕು ಎಂದೆನಿಸುತ್ತದೆ. ಈ ಸಮಯಲ್ಲಿ ಖ್ಯಾತ ಹಾಡುಗರರು ಹಾಡಿರುವ ಟ್ರೆಂಡಿಂಗ್ನಲ್ಲಿ ಗುರುತಿಸಿರುವ ಹಾಡನ್ನು ಕೇಳುತ್ತೇವೆ. ಕೆಲವೊಮ್ಮೆ ಪಾಶ್ಚಾತ್ಯ ಹಾಡುಗಳು ಇಷ್ಟವಾಗಿರುತ್ತದೆ. ಅದರಲ್ಲೂ ಜಸ್ಟಿನ್ ಬೀಬರ್ ಹಾಡು ಕೇಳಿಯೇ ಇರುತ್ತೀರಿ. ಸ್ಮಾರ್ಟ್ಫೋನ್ ಮೂಲೆಯಲ್ಲಿ ಒಂದಾದರು ಜಸ್ಟಿನ್ ಹಾಡು ಇದ್ದೇ ಇರುತ್ತದೆ.
ಜಸ್ಟಿನ್ ಖ್ಯಾತ ಕೆನಡಿಯನ್ ಸಿಂಗರ್. ಅತಿ ಕಡಿಮೆ ವಯಸ್ಸಿನಲ್ಲಿ ತನ್ನ ಹಾಡಿನ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡ ಸೆಲೆಬ್ರಟಿ ಈತ. ಸದ್ಯ ಈತನ ವಯಸ್ಸು 27. ಜಸ್ಟಿನ್ ಇಂದು ಖ್ಯಾತನಾಗಲು ಒಂದು ಆತನ ಹಾಡುಗಳು ಕಾರಣವಾದರೆ ಮತ್ತೊಂದು ಕಾರಣ ಆತನ ತಾಯಿ. ಹೌದು. ಅಂದು ಆಕೆ ತೆಗೆದುಕೊಂಡ ನಿರ್ಧಾರ ಇಂದು ಜಸ್ಟಿನ್ ಅನ್ನು ಅಷ್ಟು ದೊಡ್ಡಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.