Bheem Mania Begins: ತಮ್ಮ ವಿಡಿಯೋ ನೋಡಲು ಕಾತರರಾಗಿದ್ದಾರೆ ಜೂನಿಯರ್ ಎನ್ಟಿಆರ್: ಟ್ರೆಂಡಿಂಗ್ನಲ್ಲಿದೆ ಭೀಮ್ ಮೇನಿಯಾ
Ramaraju For Bheem From RRR: ಜೂನಿಯರ್ ಎನ್ಟಿಆರ್ ಅವರ ಅಭಿನಯದ ಸಿನಿಮಾ ಆರ್ಆರ್ಆರ್ನಿಂದ ಇಂದು ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಆಗಲಿದೆ. ಅದು ಬೆಳಿಗ್ಗೆ 11ಕ್ಕೆ. ಈ ವಿಷಯವನ್ನು ಕೆಲವು ದಿನಗಳ ಹಿಂದೆಯೇ ರಾಜಮೌಳಿ ಪ್ರಕಟಿಸಿದ್ದರು. ಆದರೆ ನಿನ್ನೆಯಿಂದ ಈ ವಿಷಯ ಹಾಗೂ ಜೂನಿಯರ್ ಎನ್ಟಿಆರ್ ಅವರ ಪಾತ್ರದ ಹೆಸರು ಭೀಮ್ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. (ಚಿತ್ರಗಳು ಕೃಪೆ: ಟ್ವಿಟರ್)
ಇನ್ನೇನು ಕೆಲವೇ ಗಂಟೆಗಳಲ್ಲಿ ಜೂನಿಯರ್ ಎನ್ಟಿಆರ್ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಆಗಲಿದೆ.
2/ 11
ಎನ್ಟಿಆರ್, ರಾಜಮೌಳಿ ಹಾಗೂ ರಾಮ್ ಚರಣ್ ತೇಜ ಅವರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಎನ್ಟಿಆರ್ ಅವರ ಪಾತ್ರವನ್ನು ಪರಿಚಯಿಸುವ ವಿಶೇಷ ವಿಡಿಯೋ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು.
3/ 11
ಲಾಕ್ಡೌನ್ನಿಂದಾಗಿ ಆ ವಿಡಿಯೋ ರಿಲೀಸ್ ಮಾಡಲು ಆಗಿರಲಿಲ್ಲ. ಆದರೆ ಈಗ ಅದಕ್ಕೆ ಕಾಲ ಕೂಡಿಬಂದಿದೆ.
4/ 11
ಆರ್.ಆರ್.ಆರ್ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರ ಪಾತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಿ ಕಳೆದ ಐದಾರು ತಿಂಗಳಿನಿಂದ ಕಾಯುತ್ತಿದ್ದಾರೆ.
5/ 11
ಜೂನಿಯರ್ ಎನ್ಟಿಆರ್ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಕುರಿತಾಗಿ ಚಿತ್ರತಂಡ ಇತ್ತೀಚೆಗಷ್ಟೆ ಪ್ರಕಟಿಸಿತ್ತು.
6/ 11
ಎನ್ಟಿಆರ್ ಅವರ ಈ ವಿಡಿಯೋಗೆ ನಟ ರಾಮ್ಚರಣ್ ತೇಜ ಕಂಠದಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
7/ 11
ಈ ಹಿಂದೆ ರಿಲೀಸ್ ಆಗಿದ್ದ ರಾಮ್ ಚರಣ್ ಅವರ ವಿಡಿಯೋಗೆ ಎನ್ಟಿಆರ್ ಅವರು ಕಂಠದಾನ ಮಾಡಿದ್ದರು.
8/ 11
ಇದೇ ಕಾರಣದಿಂದಾಗಿ ಈ ವಿಡಿಯೋ ನೋಡಲು ಜೂನಿಯರ್ ಎನ್ಟಿಆರ್ ಸಹ ಕಾತರರಾಗಿದ್ದಾರಂತೆ. ಇನ್ನು ಈಗಾಗಲೇ 5 ತಿಂಗಳು ತಡವಾಗಿದೆ ಹುಷಾರಾಗಿರು ರಾಮ್ ಚರಣ್ ಎಂದು ನಟನ ಕಾಲೆಳೆದಿದ್ದಾರೆ ಜೂನಿಯರ್ ಎನ್ಟಿಆರ್.
9/ 11
ವಿಡಿಯೋ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಈ ವಿಷಯವನ್ನು ನಿನ್ನೆಯಿಂದಲೇ ಟ್ವಿಟರ್ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಬಾಹುಬಲಿ ಚಿತ್ರದ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಟಾಲಿವುಡ್ ಸೂಪರ್ಸ್ಟಾರ್ಗಳಾದ ಜೂ.ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ಇದೇ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.