ಬಾಲಿವುಡ್ ಬಾದ್‌ಷಾ ಅಂತಾನೆ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್ ಅವರಿಗೆ ತುಂಬಾ ಜನ ಸ್ನೇಹಿತರು ಇರಬಹುದು. ಆದರೆ ತುಂಬಾನೇ ಆಪ್ತ ಸ್ನೇಹಿತರ ವಲಯದಲ್ಲಿ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಇದ್ದಾರೆ. ಇವರ ಸ್ನೇಹ ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕತ್ವದಲ್ಲಿ ಜೂಹಿ ಮತ್ತು ಶಾರುಖ್ ಇಬ್ಬರ ಪಾಲುದಾರಿಕೆ ಸಹ ಒಟ್ಟಾಗಿಯೇ ಇದೆ.
ಇನ್ನು ಈ ಬಗ್ಗೆ ಮಾತನಾಡುತ್ತಾ ನಟಿ ಸುದ್ದಿ ಪೋರ್ಟಲ್ ಗೆ ಅಂತಹ ಒಂದು ಪ್ರಕರಣದಲ್ಲಿ ಶಾರುಖ್ ಮಗ ಸಿಕ್ಕಿಹಾಕಿಕೊಳ್ಳುವ ಸಂದರ್ಭ ಬರುತ್ತೆ ಅಂತ ನನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಹೇಗೋ ಎಲ್ಲವೂ ಸರಿಯಾದಾಗ, ಅವಳಿಗೆ ಸಹಾಯ ಮಾಡಲು ಕೇಳಿದಾಗ, ಒಬ್ಬ ಸ್ನೇಹಿತೆಯಾಗಿ ಸಹಾಯ ಮಾಡುವುದು ಸರಿಯಾದ ಕೆಲಸ ಅಂತ ಅನ್ನಿಸಿತು. ಹಾಗಾಗಿ ನಾನು ಸಹಾಯ ಮಾಡಿದೆ ಅಂತ ನಟಿ ಹೇಳಿದರು.
ಐಪಿಎಲ್ ಮ್ಯಾಚ್ನಲ್ಲಿ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ಟೈಟಲ್ ಟ್ರ್ಯಾಕ್: ಮೊನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಈಡನ್ ಗಾರ್ಡನ್ಸ್ ನಲ್ಲಿ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ಟೈಟಲ್ ಟ್ರ್ಯಾಕ್ ಅನ್ನು ಪ್ಲೇ ಮಾಡಿದ್ರು. ಈ ಚಿತ್ರದಲ್ಲಿ ಶಾರುಖ್ ಮತ್ತು ಜೂಹಿ ಜೊತೆಯಾಗಿ ನಟಿಸಿದ್ದಾರೆ ಮತ್ತು ಇದು ಇಬ್ಬರಿಗೂ ತಮ್ಮ ಸಾಕಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.